ಮುದ್ರಾಡಿ: ವೃದ್ಧ ನಾಪತ್ತೆ
ಉಡುಪಿ, ಸೆ.1: ಮುದ್ರಾಡಿ ಗ್ರಾಮದ ಉಪ್ಪಳ ನಿವಾಸಿ ಬೋಜ ಯಾನೆ ಅಣ್ಣು (65) ಎಂಬ ವೃದ್ಧರು ಮಾರ್ಚ್ 22 ರಂದು ಮನೆಯಿಂದ ಹೊದವರು ಈವರೊ ವಾಪಾಸಾಗದೇ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ವ್ಯಕ್ತಿ 5 ಅಡಿ ಎತ್ತರವಿದ್ದು, ಬೆನ್ನು ಬಾಗಿರುತ್ತದೆ. ಬಿಳಿ ಬಣ್ಣದ ಅಂಗಿ ಮತ್ತು ಕಾವಿ ಬಣ್ಣದ ಲುಂಗಿ ಧರಿಸಿದ್ದು, ಕನ್ನಡ, ತುಳು, ಮರಾಠಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಈ ಹೋಲಿಕೆಯುಳ್ಳ ವ್ಯಕ್ತಿಯನ್ನು ಸಾರ್ವಜನಿಕರು ಕಂಡಲ್ಲಿ ಹೆಬ್ರಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08253-251116, ಪಿಎಸ್ಐ ನಂಬರ್: 9480805463 ಅಥವಾ ಕಾರ್ಕಳ ವೃತ್ತ ನಿರೀಕ್ಷಕರ ಕಛೇರಿ ದೂರವಾಣಿ ಸಂಖ್ಯೆ: 08258-231083, ಮೊಬೈಲ್ ನಂ:9480805435ಗೆ ಸಂಪರ್ಕಿಸುವಂತೆ ಹೆಬ್ರಿ ಪೊಲೀಸ್ ಠಾಣೆ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story