ಸೆ.21ರಿಂದ ವಿಧಾನ ಮಂಡಲ ಅಧಿವೇಶನಕ್ಕೆ ರಾಜ್ಯಪಾಲರ ಒಪ್ಪಿಗೆ
![ಸೆ.21ರಿಂದ ವಿಧಾನ ಮಂಡಲ ಅಧಿವೇಶನಕ್ಕೆ ರಾಜ್ಯಪಾಲರ ಒಪ್ಪಿಗೆ ಸೆ.21ರಿಂದ ವಿಧಾನ ಮಂಡಲ ಅಧಿವೇಶನಕ್ಕೆ ರಾಜ್ಯಪಾಲರ ಒಪ್ಪಿಗೆ](https://www.varthabharati.in/sites/default/files/images/articles/2020/09/1/257359-1598973944.jpg)
ಬೆಂಗಳೂರು, ಸೆ. 1: ವಿಧಾನ ಮಂಡಲ ಅಧಿವೇಶನ ಇದೇ ತಿಂಗಳ 21ರಿಂದ 30ರವರೆಗೆ ನಡೆಸಲು ರಾಜ್ಯಪಾಲ ವಜುಭಾಯಿ ವಾಲಾ ಅವರು ಅನುಮೋದನೆ ನೀಡಿದ್ದಾರೆ.
ಒಟ್ಟು ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಶನಿವಾರ ಮತ್ತು ರವಿವಾರ ಎರಡು ದಿನ ರಜೆಯನ್ನು ಹೊರತುಪಡಿಸಿ ಒಟ್ಟು 8 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.
Next Story