ಬಾರಾಮುಲ್ಲಾ: ಸೇನೆಯಿಂದ ಉಗ್ರರ ಎರಡು ಅಡಗುದಾಣಗಳು ಧ್ವಂಸ
ಬಾರಾಮುಲ್ಲಾ(ಜ-ಕಾ),ಸೆ.1: ಬಾರಾಮುಲ್ಲಾ ಜಿಲ್ಲೆಯ ರಾಮಪುರ ವಿಭಾಗದಲ್ಲಿಯ ನಿಯಂತ್ರಣ ರೇಖೆಯಲ್ಲಿ ಉಗ್ರರ ಎರಡು ಅಡಗುದಾಣಗಳನ್ನು ಧ್ವಂಸಗೊಳಿಸಿರುವ ಭಾರತೀಯ ಸೇನೆಯು ಐದು ಎಕೆ ಸಿರೀಸ್ ರೈಫಲ್‌ಗಳು,ಆರು ಪಿಸ್ತೂಲುಗಳು ಮತ್ತು 21 ಗ್ರೆನೇಡ್‌ಗಳು ಹಾಗೂ ಗುಂಡುಗಳನ್ನು ವಶಪಡಿಸಿಕೊಂಡಿದೆ.
ಸೋಮವಾರ ನಿಯಂತ್ರಣ ರೇಖೆಯಲ್ಲಿ ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ಗಮನಿಸಿದ್ದ ಸೇನೆಯು ಶೋಧ ಕಾರ್ಯಾಚರಣೆಯನ್ನು ಆರಂಭಿಸಿತ್ತು. ರಾತ್ರಿಯಿಡೀ ಏಳು ಗಂಟೆಗಳ ಕಾರ್ಯಾಚರಣೆಯಲ್ಲಿ ರಹಸ್ಯ ಸ್ಥಳದಲ್ಲಿ ಎರಡು ಅಡಗುದಾಣಗಳು ಪತ್ತೆಯಾಗಿದ್ದು,ಅವುಗಳನು ಧ್ವಂಸಗೊಳಿಸಲಾಗಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
Next Story





