ಅನ್‌ಲಾಕ್ 4.0: ಇನ್ನಷ್ಟು ರೈಲುಗಳನ್ನು ಓಡಿಸಲು ಇಲಾಖೆಯ ಚಿಂತನೆ
ಹೊಸದಿಲ್ಲಿ, ಸೆ.1: ಅನ್‌ಲಾಕ್ 4.0 ಮಾರ್ಗಸೂಚಿಗಳು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ಇನ್ನಷ್ಟು ವಿಶೇಷ ರೈಲುಗಳನ್ನು ಓಡಿಸಲು ತಾನು ಚಿಂತನೆ ನಡೆಸಿದ್ದು,ಇದಕ್ಕಾಗಿ ರಾಜ್ಯ ಸರಕಾರಗಳ ಜೊತೆಗೆ ಸಮಾಲೋಚಿಸುತ್ತಿರುವುದಾಗಿ ತಿಳಿಸಿದೆ.
ಮುಂಬರುವ ದಿನಗಳಲ್ಲಿ ಇನ್ನೂ 100 ರೈಲುಗಳ ಸಂಚಾರವನ್ನು ಆರಂಭಿಸಲು ಯೋಜಿಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.
ಕೊರೋನ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ಮಾ.25ರಿಂದ ದೇಶವ್ಯಾಪಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಅತಂತ್ರರಾಗಿದ್ದ ವಲಸೆ ಕಾರ್ಮಿಕರು,ವಿದ್ಯಾರ್ಥಿಗಳು,ಯಾತ್ರಿಕರು ಮತ್ತು ಪ್ರವಾಸಿಗಳ ಅನುಕೂಲಕ್ಕಾಗಿ ಅದು ಮೇ 1ರಿಂದ ಶ್ರಮಿಕ್ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿತ್ತು. ಮೇ 12ರಿಂದ 15 ವಿಶೇಷ ವಾತಾನುಕೂಲಿತ ರೈಲುಗಳು ಮತ್ತು ಜೂ.1ರಿಂದ ವೇಳಾಪಟ್ಟಿಯಲ್ಲಿನ 100 ರೈಲುಗಳ ಸಂಚಾರವನ್ನೂ ಪ್ರಾರಂಭಿಸಲಾಗಿತ್ತು.
Next Story





