ರಂಭಾಪುರಿ ಮಠದ ಶ್ರೀಗೆ ಕೊರೋನ ಸೋಂಕು ದೃಢ
ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿರುವ ರಂಭಾಪುರಿ ಮಠದ ಶ್ರೀಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ.
ನಿನ್ನೆಯಿಂದ ಶ್ರೀಗಳಿಗೆ ಸ್ವಲ್ಪ ಜ್ವರ ಇತ್ತು. ಇಂದು ಪರೀಕ್ಷೆಗೆ ಒಳಪಡಿಸಿದಾಗ ಶ್ರೀಗಳಿಗೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಗುರುಗಳಿಗೆ ವಿಶ್ರಾಂತಿ ಪಡೆಯಲು ವೈದ್ಯರ ಮನವಿ ಮಾಡಿದ್ದಾರೆ.
ಇಂದು ಬೆಂಗಳೂರಿಗೆ ತೆರಳಿದ ರಂಭಾಪುರಿ ಶ್ರೀಗಳು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
Next Story





