ಚೆನ್ನೈ ಆಟಗಾರರ ಕೋವಿಡ್ ಟೆಸ್ಟ್ ವರದಿ ನೆಗೆಟಿವ್
ಚೆನ್ನೈ, ಸೆ.1: ಕಳೆದ ಕೆಲವು ದಿನಗಳಿಂದ ಆತಂಕದ ಕ್ಷಣ ಎದುರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಮಂಗಳವಾರ ಒಂದಷ್ಟು ನಿರಾಳತೆ ಕಂಡುಬಂದಿದೆ. ಸೋಮವಾರ ಎಲ್ಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ನಡೆದಿರುವ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.
ಇಬ್ಬರು ಆಟಗಾರರಾದ ದೀಪಕ್ ಚಹಾರ್ ಹಾಗೂ ಋತುರಾಜ್ ಗಾಯಕ್ವಾಡ್‌ಗೆ ಕೊರೋನ ಪಾಸಿಟಿವ್ ಬಂದಾಗ ಸಿಎಸ್‌ಕೆ ಶಿಬಿರದಲ್ಲಿ ಆತಂಕ ಮಡುಗಟ್ಟಿತ್ತು. ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಐಪಿಎಲ್‌ನಿಂದ ನಿರ್ಗಮಿಸಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಕಳೆದ ಕೆಲವು ದಿನಗಳಿಂದ ಕಾವೇರಿದ ಚರ್ಚೆ ನಡೆದಿತ್ತು.
Next Story





