ಐಪಿಎಲ್: 20 ಸಾವಿರಕ್ಕೂ ಅಧಿಕ ಕೋವಿಡ್ ಟೆಸ್ಟ್ ಗೆ 10 ಕೋ.ರೂ. ವ್ಯಯಿಸಲು ಬಿಸಿಸಿಐ ಸಿದ್ಧತೆ

ಹೊಸದಿಲ್ಲಿ, ಸೆ.1: ಯುಎಇನಲ್ಲಿ ಸೆಪ್ಟಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ವೇಳೆ 20,000ಕ್ಕೂ ಅಧಿಕ ಕೋವಿಡ್-19 ಪರೀಕ್ಷೆ ಗಳನ್ನು ನಡೆಸಲು ಸುಮಾರು 10 ಕೋ.ರೂ.ಬಜೆಟನ್ನು ಬಿಸಿಸಿಐ ಸಿದ್ಧಪಡಿಸಿದೆ.
ಭಾರತದಲ್ಲಿ ನಡೆಸಲಾಗಿರುವ ಪರೀಕ್ಷೆಯ ವೆಚ್ಚವನ್ನು 8 ಫ್ರಾಂಚೈಸಿಗಳು ಭರಿಸಿದ್ದವು. ಆಗಸ್ಟ್ 20ರಿಂದ ಯುಎಇಗೆ ಐಪಿಎಲ್‌ತಂಡಗಳು ಆಗಮಿಸಲು ಆರಂಭಿಸಿದ ಬಳಿಕ ಬಿಸಿಸಿಐ ಆರ್‌ಟಿ-ಪಿಸಿಆರ್ ಟೆಸ್ಟ್‌ಗಳನ್ನು ನಡೆಸಲು ಆರಂಭಿಸಿತ್ತು. ಆ.20-28ರ ನಡುವೆ ಆಟಗಾರರು, ಸಹಾಯಕ ಸಿಬ್ಬಂದಿ ಸಹಿತ ಒಟ್ಟು 1,988 ಮಂದಿಗೆ ಕೋವಿಡ್ ಟೆಸ್ಟ್‌ಗಳನ್ನು ನಡೆಸಿದೆ.
‘‘ಕೋವಿಡ್ ಪರೀಕ್ಷೆಯನ್ನು ನಡೆಸಲು ಯುಎಇ ಮೂಲದ ಕಂಪೆನಿ ವಿಪಿಎಸ್ ಹೆಲ್ತ್‌ಕೇರ್‌ನೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಪ್ರತಿಯೊಬ್ಬರನ್ನೂ ಪರೀಕ್ಷಿಸಲಾಗುತ್ತದೆ. ಪ್ರತಿ ಪರೀಕ್ಷೆಗೆ ತೆರಿಗೆ ಹೊರತುಪಡಿಸಿ ಸುಮಾರು 200 ಎಇಡಿ(ದಿರ್ಹಮ್)ವೆಚ್ಚ ತಗಲುತ್ತದೆ. ಕೋವಿಡ್ ಪರೀಕ್ಷೆಗಳಿಗೆ ಬಿಸಿಸಿಐ 10 ಕೋ.ರೂ. ವೆಚ್ಚ ಮಾಡಲಿದೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





