ಯುಎಇ ತಲುಪಿದ ಪ್ಲೆಸಿಸ್, ರಬಾಡ
ದುಬೈ, ಸೆ.1: ಮುಂಬರುವ ಸೆಪ್ಟಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ತಮ್ಮ ಸಹ ಆಟಗಾರರನ್ನು ಸೇರಿಕೊಳ್ಳಲು ದಕ್ಷಿಣ ಆಫ್ರಿಕಾದ ಎಫ್‌ಡು ಪ್ಲೆಸಿಸ್, ಲುಂಗಿ ಗಿಡಿ ಹಾಗೂ ಕಾಗಿಸೊ ರಬಾಡ ಮಂಗಳವಾರ ಬೆಳಗ್ಗಿನ ಜಾವ ಯುಎಇಗೆ ಆಗಮಿಸಿದರು.
ಕೋವಿಡ್-19ರಿಂದಾಗಿ ಭಾರತ ದಿಂದ ಯುಎಇಗೆ ಸ್ಥಳಾಂತರ ವಾಗಿರುವ 13ನೇ ಆವೃತ್ತಿಯ ಐಪಿಎಲ್ ಮೂರು ತಾಣಗಳಾದ ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲಿ ಸೆ.10ರಿಂದ ನ.10ರ ತನಕ ನಡೆಯಲಿದೆ.
ದ.ಆಫ್ರಿಕಾದ ಮಾಜಿ ನಾಯಕ ಡು ಪ್ಲೆಸಿಸ್ ಹಾಗೂ ವೇಗದ ಬೌಲರ್ ಗಿಡಿ ಚೆನ್ನೈ ಸೂಪರ್ ಕಿಂಗ್ಸ್ ಪಾಳಯವನ್ನು ಸೇರಿಕೊಂಡರು. ಇನ್ನೋರ್ವ ವೇಗಿ ರಬಾಡ ಡೆಲ್ಲಿ ಕ್ಯಾಪಿಟಲ್ಸ್‌ನ ಟೀಮ್ ಹೊಟೇಲ್‌ಗೆ ತೆರಳಿದರು.
ಎರಡೂ ಫ್ರಾಂಚೈಸಿಗಳು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ದ.ಆಫ್ರಿಕಾ ಆಟಗಾರರ ಆಗಮನದ ಚಿತ್ರವನ್ನು ಹಾಕಿವೆ.
Next Story





