ಮಂಗಳೂರು: ಅಪರೂಪದ ಕಾಯಿಲೆ ಪೀಡಿತ ಬಾಲಕನ ನೆರವಿಗೆ ಮನವಿ

ಮಂಗಳೂರು, ಸೆ.2: ನಗರದಲ್ಲಿ ನೆಲೆಸಿರುವ ಕುಟುಂಬವೊಂದರ 8ರ ಹರೆಯದ ಬಾಲಕ ಜನಾನ್ ಎಂಬಾತ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಈತನ ಚಿಕಿತ್ಸೆಗೆ ಸಹಾಯಧನ ನೀಡುವಂತೆ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಮನವಿ ಮಾಡಿದೆ.
3ನೆ ತರಗತಿಯ ವಿದ್ಯಾರ್ಥಿಯಾಗಿದ್ದ ಈ ಬಾಲಕನ ಕಣ್ಣು ಹೊರಬಂದಂತಿದೆ. ದಿನದಲ್ಲಿ 2-3 ಗಂಟೆ ನಿದ್ದೆಯೂ ಮಾಡಲಾಗದೆ ಒದ್ದಾಡುತ್ತಿದ್ದಾನೆ. ಕಾಯಿಲೆ ಉಲ್ಬಣಿಸಿದ್ದು, ಮುಖದ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವೂ ಇದೆ. ಈ ಕಾಯಿಲೆಯಿಂದ ಈತ ಮಾನಸಿಕವಾಗಿಯೂ ಕುಗ್ಗಿದ್ದಾನೆ. ಈತನ ತಂದೆಯು ನಗರದ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದು, ಮಗನ ಕಾಯಿಲೆಯಿಂದಾಗಿ ಅವರೂ ಕಳೆದ 6 ತಿಂಗಳಿನಿಂದ ಕೆಲಸಕ್ಕೆ ಹೋಗಲಾಗದೆ ಚಿಂತಿತರಾಗಿದ್ದಾರೆ ಎಂದು ಈತನ ಚಿಕಿತ್ಸೆಗೆ ನೆರವು ನೀಡಲು ಸ್ಪಂದಿಸಿರುವ ಮಂಗಳೂರಿನ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ತಿಳಿಸಿದೆ.
ಈತನ ಚಿಕಿತ್ಸೆಗೆ ಸುಮಾರು 6 ಲಕ್ಷ ರೂ. ಅಗತ್ಯವಿದ್ದು, ಆಸಕ್ತ ದಾನಿಗಳು ಸೆ.5ರೊಳಗೆ "Highland Islamic Forum A/C NO- 43570100004277, IFSC CODE -BARB0PUMPWE Current Account, Bank of Baroda, Kankandy Branch, Mangalore, Karnataka, India.'ಗೆ ಪಾವತಿಸಬಹುದು.
ಹೆಚ್ಚಿನ ಮಾಹಿತಿಗೆ 9886017265, 9980996939ನ್ನು ಸಂಪರ್ಕಿಸಬಹುದು ಎಂದು ಹೈಲ್ಯಾಂಡ್ ಇಸ್ಲಾವಿುಕ್ ಫೋರಂ ಪ್ರಕಟನೆಯಲ್ಲಿ ತಿಳಿಸಿದೆ.





