ಈಶ್ವರಚಂದ್ರಗೆ ಪಿಎಚ್.ಡಿ ಪದವಿ

ಮಣಿಪಾಲ, ಸೆ.2: ‘ಯಕ್ಷಗಾನದ ಕುರಿತಾಗಿ ನಡೆಸಿದ ಸಂವಹನ ಮಾಧ್ಯಮವಾಗಿ ಯಕ್ಷಗಾನ ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಟ್ಲದ ವೀರಕಂಭ ಮೂಲದ ಈಶ್ವರಚಂದ್ರ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
ಇವರು ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಅಂಡಿಂಜೆ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು. ಈಶ್ವರ ಚಂದ್ರ ಸದ್ಯ ಮಣಿಪಾಲದಲ್ಲಿ ನೆಲೆಸಿದ್ದು, ಬೆತ್ತಸರವು ಗಣಪತಿ ಭಟ್, ಪರಮೇಶ್ವರಿ ಇವರ ಪುತ್ರರಾಗಿದ್ದಾರೆ.
Next Story





