ಮೂಡಿಗೆರೆಯ ಯೋಗ ಶಿಕ್ಷಕನಿಗೆ ಗೌರವ ಡಾಕ್ಟರೆಟ್

ಚಿಕ್ಕಮಗಳೂರು, ಸೆ.2: ಯೋಗ ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಮೂಡಿಗೆರೆ ತಾಲೂಕು ಬೆಟ್ಟದಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಫೈರೋಝ್ ಅಹ್ಮದ್ ಅವರಿಗೆ ಇಂಟರ್ ನ್ಯಾಶನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ.
ಕಳೆದ 22 ವರ್ಷಗಳಿಂದ ಬೆಟ್ಟದಮನೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಫೈರೋಝ್ ಅಹ್ಮದ್ ಅವರು ಯೋಗ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಕಂಟ್ರಿ ಕ್ಲಬ್‍ನಲ್ಲಿ ಇತ್ತೀಚೆಗೆ ನಡೆದ ವಿವಿಯ ಘಟಿಕೋತ್ಸವದಲ್ಲಿ ಫೈರೋಜ್ ಅಹ್ಮದ್ ಅವರಿಗೆ ಪದವಿ ಪ್ರಧಾನ ಮಾಡಲಾಯಿತು.
Next Story





