ಉತ್ತರ ಕೊರಿಯದಿಂದ ಪರಮಾಣು ಚಟುವಟಿಕೆ ಮುಂದುವರಿಕೆ
ಅಂತರ್ ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ವರದಿ

ಫೈಲ್ ಚಿತ್ರ
ವಿಯೆನ್ನಾ (ಆಸ್ಟ್ರಿಯ), ಸೆ. 2: ಉತ್ತರ ಕೊರಿಯದ ಕೆಲವು ಪರಮಾಣು ಸ್ಥಾವರಗಳು ತಮ್ಮ ಕಾರ್ಯನಿರ್ವಹಣೆಯನ್ನು ಈಗಲೂ ಮುಂದುವರಿಸಿದ್ದು, ಅವುಗಳ ಚಟುವಟಿಕೆಗಳು ‘‘ಗಂಭೀರ ಕಳವಳ’’ಕ್ಕೆ ಕಾರಣವಾಗಿವೆ ಎಂದು ವಿಶ್ವಸಂಸ್ಥೆಯ ಪರಮಾಣು ಚಟುವಟಿಕೆಗಳ ಮೇಲಿನ ನಿಗಾ ಸಂಸ್ಥೆ ಬುಧವಾರ ಹೊರಡಿಸಿದ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
‘‘ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮಗಳು ಮುಂದುವರಿದಿರುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗೂ ಅದು ತೀವ್ರ ವಿಷಾದನೀಯವಾಗಿದೆ’’ ಎಂದು ಅಂತರ್ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ತನ್ನ ಸದಸ್ಯರಿಗೆ ನೀಡಿದ ವರದಿಯಲ್ಲಿ ತಿಳಿಸಿದೆ.
ಹಿಂದಿನ ವರದಿಯನ್ನು 2019ರ ಆಗಸ್ಟ್ನಲ್ಲಿ ಸಲ್ಲಿಸಿದ ಬಳಿಕದ ಅವಧಿಯಲ್ಲಿ ಉತ್ತರ ಕೊರಿಯದ ಪರಮಾಣು ಸ್ಥಾವರಗಳಲ್ಲಿ ಹಲವು ಚಟುವಟಿಕೆಗಳನ್ನು ಐಎಇಎ ಪತ್ತೆಹಚ್ಚಿದ್ದು, ಯಾಂಗ್ಬ್ಯೋನ್ ಪರಮಾಣು ಸ್ಥಾವರದಲ್ಲಿ ಸಂವರ್ಧಿತ ಯುರೇನಿಯಮ್ನ ಉತ್ಪಾದನೆಗೆ ಸಮವಾದ ಚಟುವಟಿಕೆಗಳ ಸೂಚನೆಗಳನ್ನು ಅದು ವೀಕ್ಷಿಸಿದೆ ಎಂದು ವಿಯೆನ್ನಾದಲ್ಲಿ ನೆಲೆ ಹೊಂದಿರುವ ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.





