ಪಿ. ಶೇಕಬ್ಬ
ಗುರುಪುರ, ಸೆ.2: ಇಲ್ಲಿನ ಜಂಕ್ಷನ್ನಲ್ಲಿ ಅಂಗಡಿ ವ್ಯಾಪಾರಿಯಾಗಿದ್ದ, ಗುರುಪುರ ಮಠದ ಬಳಿ ನಿವಾಸಿ, ಕಾಂಗ್ರೆಸ್ಸಿನ ಹಿರಿಯ ಕಾರ್ಯಕರ್ತ ಪಿ. ಶೇಕಬ್ಬ (66) ಬುಧವಾರ ಹೃದಯಾಘಾತದಿಂದ ನಿಧನರಾದರು.
ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ರಿ)ದ ನಿಕಟಪೂರ್ವ ಉಪಾಧ್ಯಕ್ಷರಾಗಿದ್ದ ಇವರು, ಗುರುಪುರ ಗ್ರಾಪಂಗೆ ಐದು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಒಂದು ಅವಧಿಗೆ ಪಂಚಾಯತ್ ಉಪಾಧ್ಯಕ್ಷರಾಗಿದ್ದರು. ಗುರುಪುರದ ದಾರುಸ್ಸಾಲಾಂ ಮಸೀದಿ-ದರ್ಗಾದ ಅಧ್ಯಕ್ಷರಾಗಿದ್ದ ಇವರು ಪ್ರಸಕ್ತ ಗೌರವಾಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
Next Story