ಬೈರೂತ್ ಸ್ಫೋಟ: 25 ಆರೋಪಿಗಳ ಬಂಧನ

ಫೈಲ್ ಚಿತ್ರ
ಬೈರೂತ್ (ಲೆಬನಾನ್), ಸೆ. 2: ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ಆಗಸ್ಟ್ 4ರಂದು ಸಂಭವಿಸಿದ ಭೀಕರ ಸ್ಫೋಟದ ಆರೋಪಿಗಳೆಂದು ತನಿಖೆಯಲ್ಲಿ ಗುರುತಿಸಲ್ಪಟ್ಟಿರುವ ಎಲ್ಲ 25 ಮಂದಿಯನ್ನು ಬಂಧಿಸಲಾಗಿದೆ ಎಂದು ನ್ಯಾಯಾಂಗ ಮೂಲವೊಂದು ಎಎಫ್ಪಿ ಸುದ್ದಿ ಸಂಸ್ಥೆಗೆ ಮಂಗಳವಾರ ತಿಳಿಸಿದೆ.
ಬಂದರು ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ 180ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 6,500 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಇಡೀ ರಾಜಧಾನಿ ಜರ್ಝರಿತಗೊಂಡಿದೆ.
21 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಹಾಗೂ ಉಳಿದ ನಾಲ್ವರ ಬಂಧನಕ್ಕೆ ತನಿಖಾ ನ್ಯಾಯಾಧೀಶ ಫದಿ ಸವನ್ ಮಂಗಳವಾರ ಬಂಧನ ವಾರಂಟ್ ಹೊರಡಿಸಿದ್ದಾರೆ ಎಂದು ನ್ಯಾಯಾಂಗ ಮೂಲ ತಿಳಿಸಿದೆ.
Next Story





