ಭಾರತದ ಖಾಯಂ ವಲಸಿಗರಿಗೆ ಮಲೇಶ್ಯ ಪ್ರವೇಶ ನಿಷೇಧ
ಕೌಲಾಲಂಪುರ (ಮಲೇಶ್ಯ), ಸೆ. 2: ದೀರ್ಘಾವಧಿ ವಲಸೆ ಪಾಸ್‌ಗಳನ್ನು ಹೊಂದಿರುವ ಭಾರತ, ಇಂಡೋನೇಶ್ಯ ಮತ್ತು ಫಿಲಿಪ್ಪೀನ್ಸ್‌ಗಳ ಪ್ರಜೆಗಳು ಮಲೇಶ್ಯ ಪ್ರವೇಶಿಸುವುದನ್ನು ಸೆಪ್ಟಂಬರ್ 7ರಿಂದ ನಿಷೇಧಿಸಲಾಗುವುದು ಎಂದು ಆ ದೇಶ ಮಂಗಳವಾರ ತಿಳಿಸಿದೆ.
ದೇಶದಲ್ಲಿ ಹೊಸದಾಗಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಂತೆಯೇ, ವಿದೇಶಗಳಿಂದ ಕೊರೋನ ವೈರಸ್ ಬರುವುದನ್ನು ನಿಲ್ಲಿಸಲು ಅದು ಈ ಕ್ರಮ ತೆಗೆದುಕೊಂಡಿದೆ.
ದೇಶದ ಖಾಯಂ ನಿವಾಸಿ ವಲಸಿಗರು, ವಿದ್ಯಾರ್ಥಿಗಳು, ಸಂಗಾತಿ ವೀಸಾದ ಮೂಲಕ ಬರುವವರು ಹಾಗೂ ಮಲೇಶ್ಯದ ‘ಮೈ ಸೆಕಂಡ್ ಹೋಮ್’ ಕಾರ್ಯಕ್ರಮಗಳ ಭಾಗೀದಾರರಿಗೆ ನಿಷೇಧ ಅನ್ವಯವಾಗುತ್ತದೆ.
Next Story





