ದ.ಕ.ಜಿಲ್ಲಾ ಮಟ್ಟದ ‘ಶಿಕ್ಷಕ ಪ್ರಶಸ್ತಿ’ ಪ್ರಕಟ
ಮಂಗಳೂರು, ಸೆ.3: ಭಾರತದ ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣ ನ್ ಅವರ ಜನ್ಮದಿನವನ್ನು (ಸೆ.5)ಶಿಕ್ಷಕರ ದಿನವನ್ನಾಗಿ ಆಚರಿಸುವ ಕಾರ್ಯಕ್ರಮದಲ್ಲಿ ವಿತರಿಸಲಾಗುವ ದ.ಕ.ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಪ್ರಕಟಿಸಿದ್ದಾರೆ.
1.ಪ್ರಾಥಮಿಕ (ಕಿರಿಯ ವಿಭಾಗ) ಶಾಲೆ: ಬಂಟ್ವಾಳ ಶಿಕ್ಷಣ ವಲಯದ ಅಳಕೆ ಮಜಲು ಶಾಲೆಯ ಕೆ.ಇಸ್ಮಾಲಿ, ಬೆಳ್ತಂಗಡಿ ವಲಯದ ರಕ್ತೇಶ್ವರಿ ಪದವು ಶಾಲೆಯ ಚೈತ್ರಪ್ರಭಾ ಶ್ರೀಶಾಂ, ಮಂಗಳೂರು ಉತ್ತರ ವಲಯದ ತಣ್ಣೀರುವಾವಿ ಶಾಲೆಯ ಹರಿಣಾಕ್ಷಿ, ಮಂಗಳೂರು ದಕ್ಷಿಣ ವಲಯದ ಮಲಾರ್ ರಾಧಾಕೃಷ್ಣ ರಾವ್ ಟಿಡಿ, ಮೂಡುಬಿದಿರೆ ವಲಯದ ಕಡಂದಲೆ ಶಾಲೆಯ ಅನಂತ ಪದ್ಮನಾಭ ಚೆನ್ನಿ, ಪುತ್ತೂರು ವಲಯದ ಕುಂಡಾಜೆ ಶಾಲೆಯ ಪಿ.ಎಸ್. ನಾರಾಯಣ, ಸುಳ್ಯ ವಲಯದ ಬಾನಡ್ಕ ಶಾಲೆಯ ಜಾನಕಿ ಕೆ. ಆಯ್ಕೆಯಾಗಿದ್ದಾರೆ.
2. ಪ್ರಾಥಮಿಕ (ಹಿರಿಯ ವಿಭಾಗ) ಶಾಲೆ: ಬಂಟ್ವಾಳ ಶಿಕ್ಷಣ ವಲಯದ ಮಜಿ ಶಾಲೆಯ ಸಂಗೀತಾ ಶರ್ಮ, ಬೆಳ್ತಂಗಡಿ ವಲಯದ ಕುಂಜತ್ತೋಡಿ ಶಾಲೆಯ ಸಬೀನಾ, ಮಂಗಳೂರು ಉತ್ತರ ವಲಯದ ಗಾಂಧಿನಗರ ಶಾಲೆಯ ಇಂದ್ರಾವತಿ ಎನ್., ಮಂಗಳೂರು ದಕ್ಷಿಣ ವಲಯದ ಕೋಟೆಪುರ ಟಿಪ್ಪುಸುಲ್ತಾನ ಶಾಲೆಯ ಎಂ.ಎಚ್.ಮಲಾರ್, ಮೂಡುಬಿದಿರೆ ವಲಯದ ಮಾಂಪಾಡಿ ಶಾಲೆಯ ಜಾನೆಟ್ ಪಿಂಟೋ, ಪುತ್ತೂರು ವಲಯದ ಹಾರಾಡಿ ಶಾಲೆಯ ಪ್ರಶಾಂತ್ ಪಿಎಲ್, ಸುಳ್ಯ ವಲಯದ ಇಡ್ಯಡ್ಕ ಶಾಲೆಯ ರೇಖಾ ಸರ್ವೋತ್ತಮ ಆಯ್ಕೆಯಾಗಿದ್ದಾರೆ.
3. ಪ್ರೌಡಶಾಲಾ ವಿಭಾಗ : ಬಂಟ್ವಾಳ ಶಿಕ್ಷಣ ವಲಯದ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ರಾಧಾಕೃಷ್ಣ ಬಾಳಿಗಾ, ಬೆಳ್ತಂಗಡಿ ವಲಯದ ಕೊಕ್ರಾಡಿ ಪ್ರೌಢಶಾಲೆಯ ಅಕ್ಕಮ್ಮ, ಮಂಗಳೂರು ಉತ್ತರ ವಲಯದ ಬಡಗ ಎಕ್ಕಾರು ಪ್ರೌಢಶಾಲೆಯ ಉಸ್ಮಾನ್ ಜಿ., ಮಂಗಳೂರು ದಕ್ಷಿಣ ವಲಯದ ಕಿನ್ನಿಕಂಬಳ ಪ್ರೌಢಶಾಲೆಯ ಜಯಶ್ರೀ, ಮೂಡುಬಿದಿರೆ ವಲಯದ ಅಳಿಯೂರು ಪ್ರೌಢಶಾಲೆಯ ವೆಂಕಟೇಶ್ ದಾಮ್ಲೆ, ಪುತ್ತೂರು ವಲಯದ ರಾಮಕುಂಜ ಪ್ರೌಢಶಾಲೆಯ ವೆಂಕಟೇಶ್ ದಾಮ್ಲೆ, ಸುಳ್ಯ ವಲಯದ ಪಂಜ ಶಾಲೆಯ ಟೈಟಸ್ ವರ್ಗೀಸ್ ಆಯ್ಕೆಯಾಗಿದ್ದಾರೆ.
ವಿಶೇಷ ಪ್ರಶಸ್ತಿ: ವಾಮಂಜೂರು ಮಂಗಳಜ್ಯೋತಿ ಶಾಲೆಯ ಯೋಗ ಮತ್ತು ದೈಹಿಕ ಶಿಕ್ಷಕ ಶೇಖರ ನಾಯ್ಕ ಕಡ್ತಲ ಅವರಿಗೆ ವಿಶೇಷ ಪ್ರಶಸ್ತಿ ಘೋಷಿಸಲಾಗಿದೆ.







