ಚೀನಾದೊಂದಿಗೆ ಗಡಿ ಉದ್ವಿಗ್ನತೆಯ ನಡುವೆಯೇ ಲೇಹ್‌ಗೆ ಸೇನಾ ಮುಖ್ಯಸ್ಥ ಜ.ನರವಾಣೆ ಭೇಟಿ

ಹೊಸದಿಲ್ಲಿ,ಸೆ.3: ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆಯೇ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಅವರು ಲಡಾಖ್‌ನಲ್ಲಿಯ ಹಾಲಿ ಭದ್ರತಾ ಸ್ಥಿತಿಯನ್ನು ಪರಿಶೀಲಿಸಲು ಲೇಹ್‌ಗೆ ಎರಡು ದಿನಗಳ ಭೇಟಿಯನ್ನು ನೀಡಿದ್ದಾರೆ.
ಹಿರಿಯ ಕಮಾಂಡರ್‌ಗಳು ಮುಂಚೂಣಿ ಪ್ರದೇಶ ಮತ್ತು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಸ್ಥಿತಿಯ ಬಗ್ಗೆ ಜ.ನರವಾಣೆ ಅವರಿಗೆ ವಿವರಗಳನ್ನು ಒದಗಿಸಲಿದ್ದಾರೆ.
ಲಡಾಖ್‌ನಲ್ಲಿ ಚೀನಿ ಅತಿಕ್ರಮಣದ ಪ್ರಯತ್ನಗಳನ್ನು ಭಾರತೀಯ ಯೋಧರು ವಿಫಲಗೊಳಿಸಿರುವ ಸಂದರ್ಭದಲ್ಲಿಯೇ ಜ.ನರವಾಣೆಯವರ ಭೇಟಿ ನಡೆದಿದೆ.
ಜ.ನರವಾಣೆ ಅವರು ತನ್ನ ಭೇಟಿ ಸಂದರ್ಭದಲ್ಲಿ ಭಾರತೀಯ ಸೇನೆಯ ಯುದ್ಧ ಸನ್ನದ್ಧತೆಯನ್ನೂ ಪುನರ್‌ಪರಿಶೀಲಿಸಲಿದ್ದಾರೆ.
Next Story





