ಕುಂದಾಪುರ: ಸರಕಾರಿ ತಾಲೂಕು ಆಸ್ಪತ್ರೆಗೆ ವೈದ್ಯಕೀಯ ಪರಿಕರ ಹಸ್ತಾಂತರ

ಕುಂದಾಪುರ, ಸೆ.3: ಕುಂದಾಪುರದ ಪ್ರತಿಷ್ಠಿತ ಎಡ್ವರ್ಡ್ ಸ್ಮಾರಕ ಕ್ಲಬ್ ಹಾಗೂ ರೀಡಿಂಗ್ ರೂಮ್ ಸೊಸೈಟಿ ಇವರ ವತಿಯಿಂದ ಕುಂದಾಪುರ ತಾಲೂಕು ಆಸ್ಪತ್ರೆಗೆ ವೈದ್ಯಕೀಯ ಪರಿಕರಗಳ ಹಸ್ತಾಂತರ ಕಾರ್ಯಕ್ರಮ ಕ್ಲಬ್‌ನ ಸಭಾಂಗಣ ದಲ್ಲಿ ಇಂದು ನೆರವೇರಿತು.
ಕ್ಲಬ್ ವತಿಯಿಂದ ಸದಸ್ಯರ ದೇಣಿಗೆ ಸಹಕಾರದೊಂದಿಗೆ ಎರಡು ಇಸಿಜಿ ಉಪಕರಣ ಹಾಗೂ ಐದು ಡಿಜಿಟಲ್ ಬಿಪಿ ಮಾನಿಟರ್‌ಗಳನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸ್ವೀಕರಿಸಿದರು.
ಈ ಸಮಾರಂಭದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಕೋವಿಡ್ ನೋಡೆಲ್ ಅಧಿಕಾರಿ ಡಾ.ನಾಗೇಶ್, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಎಡ್ವರ್ಡ್ ಕ್ಲಬ್‌ನ ಅಧ್ಯಕ್ಷ ನಾಗರಾಜ್ ಕೆ. ವಹಿಸಿದ್ದರು. ಹಿರಿಯ ಸದಸ್ಯ ಎಂ.ವೀರಣ್ಣ ಶೆಟ್ಟಿ ಸ್ವಾಗತಿಸಿ ಕ್ಲಬ್‌ನ ಕಿರು ಪರಿಚಯ ನೀಡಿದರು. ಕಾರ್ಯದರ್ಶಿ ಎನ್.ಸದಾನಂದ ಶೆಟ್ಟಿ ವಂದಿಸಿ, ನಿವೃತ್ತ ಮುಖ್ಯ ಶಿಕ್ಷಕ ದಿನಕರ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Next Story





