ಮೈಸೂರಿನಲ್ಲಿಂದು 475 ಮಂದಿಗೆ ಕೊರೋನ ಸೋಂಕು: 8 ಮಂದಿ ಸಾವು

ಮೈಸೂರು,ಸೆ.3: ಮೈಸೂರಿನಲ್ಲಿ ಗುರುವಾರ 475 ಮಂದಿಗೆ ಕೊರೋನ ಸೋಂಕು ಪತ್ತೆಯಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ.
ದಿನೇ ದಿನೇ ಕೊರೋನ ಸೋಂಕು ಹೆಚ್ಚುತ್ತಲೆ ಇದ್ದು ಇಂದು 475 ಮಂದಿಗೆ ಸೇರಿದಂತೆ ಇದುವರೆಗೆ 19,828 ಮಂದಿಗೆ ಕೊರೋನ ಸೋಂಕು ಪತ್ತೆಯಾದಂತಾಗಿದೆ. ಇಂದು 237 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ 13,329 ಮಂದಿ ಗುಣಮುರಾಗಿದ್ದು, ಸದ್ಯ 6,024 ಸಕ್ರಿಯ ಪ್ರಕರಣಗಳು ಇವೆ.
ಇಂದು 8 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ 475 ಮಂದಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
Next Story





