ದಿವಿಜ್ ಶರಣ್-ನಿಕೋಲಾ ಮೊದಲ ಸುತ್ತಿನಲ್ಲಿ ಹೊರಕ್ಕೆ
ಯುಎಸ್ ಓಪನ್

ನ್ಯೂಯಾರ್ಕ್, ಸೆ.3: ಯುಎಸ್ ಓಪನ್‌ನ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಡಿವಿಜ್ ಶರಣ್ ಮತ್ತು ಅವರ ಸರ್ಬಿಯಾದ ಪುರುಷರ ಡಬಲ್ಸ್ ಜೊತೆಗಾರ ನಿಕೋಲಾ ಕ್ಯಾಸಿಕ್ ಸೋಲು ಅನುಭವಿಸಿದ್ದಾರೆ.
ಇಂಡೋ-ಸರ್ಬಿಯ ಜೋಡಿ ಶರಣ್ ಮತ್ತು ನಿಕೋಲಾ ಅವರು 8ನೇ ಶ್ರೇಯಾಂಕಿತರಾದ ನಿಕೋಲಾ ಮೆಕ್ಟಿಕ್ ಮತ್ತು ವೆಸ್ಲಿ ಕೂಲ್ಹೋಫ್ ವಿರುದ್ಧ 4-6, 6-3, 3-6 ಅಂತರದಿಂದ ಸೋತು ನಿರ್ಗಮಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಶರಣ್-ನಿಕೋಲಾ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದರೂ, ಎರಡನೇ ಸೆಟ್‌ನಲ್ಲಿ 6-3 ಅಂತರದ ಜಯದೊಂದಿಗೆ ಪಂದ್ಯವನ್ನು ನಿರ್ಣಾಯಕ ಸ್ಥಾನಕ್ಕೆ ತಲುಪಿಸಿದರು. ಆದರೆ ಮೂರನೇ ಸೆಟ್‌ನಲ್ಲಿ ಅವರಿಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.
ಈ ವರ್ಷ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದ ಕ್ರೀಡಾಪಟುಗಳ ಪಟ್ಟಿಯಲ್ಲಿದ್ದ ಶರಣ್ ಅವರು ಈ ಹಿಂದೆ ಪ್ರೇಗ್ ಚಾಲೆಂಜರ್ಸ್‌ನಲ್ಲಿ ರಾಬಿನ್ ಹಾಸ್ ಜೊತೆ ಡಬಲ್ಸ್ ಆಡಿದ್ದರು. ಕೋವಿಡ್ -19 ಕಾರಣದಿಂದಾಗಿ ಟೆನಿಸ್ ಚಟುವಟಿಕೆಗಳು ನಿಂತ ಬಳಿಕ ಇದು ಅವರ ಮೊದಲ ಟೂರ್ನಮೆಂಟ್ ಆಗಿದೆ.
ಭಾರತದ ರೋಹನ್ ಬೋಪಣ್ಣ ಮತ್ತು ಸುಮಿತ್ ನಾಗಲ್ ಗುರುವಾರ ತಮ್ಮ ಪಂದ್ಯಗಳನ್ನು ಆಡಲಿದ್ದಾರೆ. ಬೋಪಣ್ಣರಿಗೆ ಕೆನಡಾದ ಡೆನ್ನಿಸ್ ಶಪೋ ವೊಲೊವ್ ಡಬಲ್ಸ್ ಪಾರ್ಟ್‌ನರ್ ಆಗಿದ್ದಾರೆ. ಅಮೆರಿಕಾದ ಜೋಡಿ ನೋವಾ ರೂಬಿನ್ ಮತ್ತು ಅರ್ನೆಸ್ಟೊ ಎಸ್ಕೋಬೆಡೊ ಅವರನ್ನು ಎದುರಿಸಲಿದ್ದಾರೆ.
ಈ ಮಧ್ಯೆ ನಾಗಲ್ ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಅವರನ್ನು ಎದುರಿಸಲಿದ್ದಾರೆ. 2013ರಲ್ಲಿ ಸೋಮದೇವ್ ದೇವ್‌ವರ್ಮನ್ ನಂತರ ಗ್ರಾನ್ ಸ್ಲಾಮ್ ಪಂದ್ಯಾವಳಿಯ ಎರಡನೇ ಸುತ್ತಿಗೆ ಮುನ್ನಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನಾಗಲ್ ಪಾತ್ರರಾಗಿದ್ದಾರೆ.







