ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿಗೆ ಪರಿವರ್ತನಾ ಪ್ರಶಸ್ತಿ

ಮಂಗಳೂರು, ಸೆ.4: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ (ಬಿಎಸ್‌ಎನ್‌ಡಿಪಿ) ಸಂಘಟನೆಯಿಂದ ಈ ಬಾರಿಯ ರಾಜ್ಯ ಮಟ್ಟದ ಪರಿವರ್ತನಾ ಶ್ರೀ ಪ್ರಶಸ್ತಿಗೆ ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಆಯ್ಕೆಯಾಗಿದ್ದಾರೆ.
ಚಲನಚಿತ್ರ ನಟ ಸುಮನ್ ತಲ್ವಾರ್, ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾರಾಯಣ ನಾಯ್ಕ, ಸಂಶೋಧಕಿ ಡಾ.ಸಬೀಹಾ ತಸ್ನೀಮ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉದಯ ಪೂಜಾರಿ ಬಿರುವೆರ್ ಕುಡ್ಲ ಸಂಘಟನೆ ಸ್ಥಾಪಿಸಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆ. ಸಂಘಟನೆಯ ಮೂಲಕ 2 ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಅಶಕ್ತರಿಗೆ ಸಹಾಯ ನೀಡಿ, ಚಿಕಿತ್ಸಾ ವೆಚ್ಚ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ, ಅಂಗವಿಕಲರಿಗೆ ವಿವಿಧ ಪರಿಕರಗಳನ್ನು ವಿತರಿಸಿ ದ್ದಾರೆ. ಸಾಮಾಜಿಕ, ಕ್ರೀಡೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ಕೂಡ ಸಕ್ರಿಯರಾಗಿದ್ದಾರೆ. ಇವರ ನೇತೃತ್ವದ ಬಿರುವೆರ್ ಕುಡ್ಲ ಸಂಘಟನೆ ಉಡುಪಿ, ದಕ್ಷಿಣ ಕನ್ನಡ, ದುಬೈ ಸೇರಿದಂತೆ ವಿವಿದೆಡೆ ಸಹ ಘಟಕಗಳನ್ನು ಸ್ಥಾಪಿಸಿ ಬಿರುವೆರ್ ಕುಡ್ಲದ ಇತರ ಸದಸ್ಯರನ್ನು ಜೊತೆ ಗೂಡಿಸಿಕೊಂಡು, ಸಾಮಾಜಿಕ ಚಟುವಟಿಕೆಗಾಗಿ 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.
ಉದಯ ಪೂಜಾರಿ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದು ನಾಯಕನಟನಾಗಿ ಕನ್ನಡ ಮತ್ತು ತುಳು ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.





