ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ನೇರ ಸಂದರ್ಶನ
ಉಡುಪಿ, ಸೆ.4: ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲು 6 ತಿಂಗಳ ಅವಧಿಗಾಗಿ ಪ್ರಯೋಗಶಾಲಾ ತಂತ್ರಜ್ಞರ 42 ಹುದ್ದೆಗಳಿಗೆ ಸೆಪ್ಟೆಂಬರ್ 5ರಿಂದ 8ರವೆಗೆ ನೇರ ಸಂದರ್ಶನ ನಡೆಯಲಿದೆ.
ಡಿಎಂಎಲ್‌ಟಿ/ಬಿಎಂಎಲ್‌ಟಿ ಯವರಿಗೆ ಪ್ರಥಮ ಆದ್ಯತೆ ಅಥವಾ ಎಂ.ಎಸ್ಸಿ ನರ್ಸಿಂಗ್/ಬಿ.ಎಸ್ಸಿ ನರ್ಸಿಂಗ್/ಜಿಎನ್‌ಎಂ: ಡಿಪ್ಲೊಮೋ ಆಪರೇಷನ್ ಥೇಟರ್ ಟೆಕ್ನಾಲಜಿಸ್ಟ್ ತರಬೇತಿ, ಪ್ಯಾರಾ ಮೆಡಿಕಲ್ ಬೋರ್ಡ್‌ನಲ್ಲಿ ನೊಂದಣಿ, ಅಥವಾ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೊಂದಣಿ ಮಾಡಿದವರು ವಿದ್ಯಾರ್ಹತೆಯ ಮೂಲ ಮತ್ತು ದೃಡೀಕೃತ ದಾಖಲಾತಿಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಅಜ್ಜರ ಕಾಡು ಇಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಡಿಹೆಚ್‌ಓ ಪ್ರಕಟಣೆ ತಿಳಿಸಿದೆ.
Next Story





