ಬೆಂಗಳೂರು ನಗರ ಸ್ವಯಂ ಸುಸ್ಥಿರ ಮಹಾನಗರ ಪ್ರಶಸ್ತಿಗೆ ಭಾಜನ
ಬೆಂಗಳೂರು, ಸೆ.4: ನಲವತ್ತು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ವಿಭಾಗದಲ್ಲಿ ಕೊಡಲಾಗುತ್ತಿರುವ ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ ಅಂದರೆ ಅತ್ಯುತ್ತಮ ಸ್ವಯಂ ಸುಸ್ಥಿರ ಮಹಾನಗರ ಪ್ರಶಸ್ತಿಗೆ ಬೆಂಗಳೂರು ಭಾಜನವಾಗಿದೆ.
ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ತ್ಯಾಜ್ಯ ನಿರ್ವಹಣೆ ಕುರಿತು ಕೇಂದ್ರೀಕರಿಸುವುದು ಹಾಗೂ ಮನೆ ಗೊಬ್ಬರದ ಕುರಿತು ಉತ್ತೇಜನ ನೀಡುತ್ತಿರುವುದಕ್ಕೆ ಈ ಪ್ರಶಸ್ತಿ ಲಭಿಸಿರುವುದಾಗಿ ಅವರು ಹೇಳಿದ್ದಾರೆ.
ಬಯೋಮ್ಯಾನ್ ಮೂಲಕ ಮನೆಯಲ್ಲೇ ಗೊಬ್ಬರ ತಯಾರಿ ವ್ಯವಸ್ಥೆಯಿಂದಾಗಿ ಬೆಂಗಳೂರಿಗೆ ಈ ಪ್ರಶಸ್ತಿ ಲಭಿಸಿದ್ದು, ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ ಬಿರುದು ಪಡೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು 40 ಲಕ್ಷ ಜನಸಂಖ್ಯೆಗಿಂತ ಅಧಿಕ ಜನರು ಇರುವ ವಿಭಾಗದಲ್ಲಿ ‘ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ’ ಎಂಬ ಬಿರುದು ಪಡೆದಿದೆ. 3,200ರ ಪೈಕಿ 1,491 ಅಂಕಗಳನ್ನು ಪಡೆದಿದೆ. 10 ಲಕ್ಷ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬೆಂಗಳೂರು 37ನೇ ರ‍್ಯಾಂಕ್ ಪಡೆದಿದೆ.







