13ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿ ನಾಳೆ ಬಿಡುಗಡೆ: ಬ್ರಿಜೇಶ್ ಪಟೇಲ್

ದುಬೈ, ಸೆ.5: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟ್ವೆಂಟಿ-20 ಟೂರ್ನಮೆಂಟ್‌ನ ವೇಳಾಪಟ್ಟಿಯು ರವಿವಾರ ಬಿಡುಗಡೆಯಾಗಲಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಶನಿವಾರ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಈ ವರ್ಷದ ಐಪಿಎಲ್ ಟೂರ್ನಿಯು ಸೆಪ್ಟಂಬರ್ 19ರಿಂದ ಆರಂಭವಾಗಿ ನವೆಂಬರ್ 10ರ ತನಕ ಯುಎಇಯ ಮೂರು ಸ್ಥಳಗಳಾದ-ದುಬೈ, ಅಬುಧಾಬಿ ಹಾಗೂ ಶಾರ್ಜಾಗಳಲ್ಲಿ ನಡೆಯಲಿದೆ. ತಮ್ಮ ನೆಚ್ಚಿನ ತಂಡಗಳು ಯಾವ ದಿನದಂದು ಆಡುತ್ತವೆ ಎಂದು ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
Next Story





