ಮಲ್ಪೆ, ಸೆ.5: ಮಲ್ಪೆಬಾಪುತೋಟ 2ನೇ ಟಿ ಧಕ್ಕೆಯ ನೀರಿನಲ್ಲಿ ಸುಮಾರು 40 ರಿಂದ 45 ವರ್ಷ ಪ್ರಾಯದ ಗಂಡಸಿನ ಮೃತದೇಹವು ಸೆ.5ರಂದು ಬೆಳಗ್ಗೆ ಪತ್ತೆಯಾಗಿದೆ.
ಮೃತರು 2 ದಿನಗಳ ಹಿಂದೆ ಯಾವುದೋ ರೀತಿಯಲ್ಲಿ ಧಕ್ಕೆಯ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.