ಕರ್ತವ್ಯಕ್ಕೆ ಅಡ್ಡಿ : ದೂರು ದಾಖಲು
ಪುತ್ತೂರು : ನಗರಸಭಾ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಮೂವರ ವಿರುದ್ದ ಪುತ್ತೂರು ನಗರಸಭಾ ಪೌರಾಯುಕ್ತರು ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ನಗರಸಭಾ ವ್ಯಾಪ್ತಿಯ ಬನ್ನೂರು ಗ್ರಾಮದ ಕೃಷ್ಣನಗರ ಎಂಬಲ್ಲಿ ಪುತ್ತೂರು ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಅವರು ಕಾರ್ಯಾಲಯದ ಸಿಬ್ಬಂದಿಗಳೊಂದಿಗೆ ರಸ್ತೆ ಬದಿ ತ್ಯಾಜ್ಯ ಎಸೆಯುವುತ್ತಿರುವುದನ್ನು ಕಂಡು ಹಿಡಿಯುವ ಬಗ್ಗೆ ಸಿಸಿ ಟಿವಿ ಅಳವಡಿಸುತ್ತಿರುವ ಸಂದರ್ಬದಲ್ಲಿ ಎರಡು ಮಹಿಳೆಯರು ಅಟೋ ರಿಕ್ಷಾದಲ್ಲಿ ಆಗಮಿಸಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಕಂಡು ಬಂದಿತ್ತು. ಈ ಮಹಿಳೆಯರಲ್ಲಿ ತ್ಯಾಜ್ಯ ಎಸೆದರೆ ನಗರಸಭೆಯಿಂದ ದಂಡ ವಿಧಿಸಲಾಗುವುದು ಎಂದು ತಿಳಿಸಿದಾಗ ಆ ಮಹಿಳೆಯರು ತಮ್ಮ ಮನೆಯವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದು, ಈ ಸಮಯದಲ್ಲಿ ರಝಾಕ್, ನಿಝಾಮ್ ಮತ್ತು ಇಸ್ಮಾಯಿಲ್ ಅವರು ಅಲ್ಲಿಗೆ ಬಂದು ಅವ್ಯಾಚ್ಯ ಶಬ್ದಗಳಿಂದ ಬೈದು ಸಾರ್ವಜನಿಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ನಗರಸಭಾ ಸಿಬ್ಬಂದಿಗಳ ಮೇಲ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





