2021ರ ಮದ್ಯಂತರದೊಳಗೆ ಕೊರೋನ ಲಸಿಕೆಯ ಜಾಗತಿಕ ವಿತರಣೆ ಅಸಾಧ್ಯ

ಜಿನೇವಾ,ಸೆ.5: ಕೋವಿಡ್-19 ಸೋಂಕಿನ ಲಸಿಕೆ ಸಿದ್ಧಗೊಂಡರೂ, ಅದನ್ನು 2021ರ ಮಧ್ಯಂತರದೊಳಗೆ ಜಾಗತಿಕವಾಗಿ ಬೃಹತ್ ಪ್ರಮಾಣದಲ್ಲಿ ವಿತರಿಸಲು ಸಾಧ್ಯವಾಗಲಾರದೆಂದು ವಿಶ್ವ ಆರೋಗ್ಯಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಶುಕ್ರವಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ‘‘ವಾಸ್ತವಿಕವಾಗಿ ಹೇಳುವುದಾದರೆ, ಬಹುಶಃ 2021ರ ದ್ವಿತೀಯಾರ್ಧದಲ್ಲಿ ಅಂದರೆ ಎರಡನೇ ತ್ರೈಮಾಸಿಕ ಅಥವಾ ಮೂರನೆ ತ್ರೈಮಾಸಿಕದಲ್ಲಿ , ವಿವಿಧ ದೇಶಗಳಿ ವಿವಿಧ ದೇಶಗಳಿಗೆ ವಿತರಿಸಲು ಸಾಧ್ಯವಾಗಲಿದೆ’’ ಸ್ವಾಮಿನಾಥನ್ ಹೇಳಿದ್ದಾರೆ.
ಕೊರೋನ ವೈರಸ್ ಸೋಂಕಿನ ವಿರುದ್ಧ ಸಂಶೋಧಿಸಲಾಗಿರುವ ಅನೇಕ ಲಸಿಕೆಗಳ ಪ್ರಾಯೋಗಿಕ ಪರೀಕ್ಷೆಯು ಈಗ ಮೂರನೆ ಹಂತದಲ್ಲಿದ್ದು, ಅವು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸ್ವಾಮಿ ನಾಥನ್ ಹೇಳಿದ್ದಾರೆ.
Next Story





