ಎರಡನೇ ಸುತ್ತು ತಲುಪಿದ ಬೋಪಣ್ಣ-ಶಪೊವಾಲೊವ್

ನ್ಯೂಯಾರ್ಕ್: ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಭಾರತದ ಹಿರಿಯ ಆಟಗಾರ ರೋಹನ್ ಬೋಪಣ್ಣ ತನ್ನ ಕೆನಡಾದ ಜೊತೆಗಾರ ಡೆನಿಸ್ ಶಪೊವಾಲೊವ್ ಜೊತೆಗೂಡಿ ಯುಎಸ್ ಓಪನ್‌ನ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಎರಡನೇ ಸುತ್ತಿಗೆ ತೇರ್ಗಡೆಯಾದರು.
ಶುಕ್ರವಾರ ಒಂದು ಗಂಟೆ, 22 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಡಬಲ್ಸ್ ಪಂದ್ಯದಲ್ಲಿ ಬೋಪಣ್ಣ ಹಾಗೂ ಶಪೊವಾಲೊವ್ ಅಮೆರಿಕದ ಎದುರಾಳಿಗಳಾದ ಎರ್ನೆಸ್ಟೊ ಎಸ್ಕೊಬೆಡೊ ಹಾಗೂ ನೊಯಾ ರುಬಿನ್‌ರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಇಂಡೋ-ಕೆನಡಾ ಜೋಡಿ ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಕೆವಿನ್ ಕ್ರಾವೀಟ್ ಹಾಗೂ ಆಂಡ್ರಿಯಸ್ ಮೀಸ್‌ರನ್ನು ಎದುರಿಸಲಿದ್ದಾರೆ.
ಸುಮಿತ್ ನಾಗಲ್ ಹಾಗೂ ದಿವಿಜ್ ಶರಣ್ ಟೂರ್ನಮೆಂಟ್‌ನಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಬೋಪಣ್ಣ ಸ್ಪರ್ಧಾಕಣದಲ್ಲಿರುವ ಭಾರತದ ಏಕೈಕ ಆಟಗಾರ. ಸುಮಿತ್ ನಾಗಲ್ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.3ನೇ ಆಟಗಾರ ಡೊಮಿನಿಕ್ ಥೀಮ್ ವಿರುದ್ಧ ನೇರ ಸೆಟ್‌ಗಳಿಂದ ಸೋತಿದ್ದರು. ಶರಣ್ ಸರ್ಬಿಯದ ತನ್ನ ಜೊತೆಗಾರ ನಿಕೊಲಾ ಕಾಸಿಕ್‌ರೊಂದಿಗೆ ಪುರುಷರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 8ನೇ ಶ್ರೇಯಾಂಕದ ನಿಕೊಲಾ ಮೆಕ್‌ಟಿಕ್ ಹಾಗೂ ವೆಸ್ಲೆ ಕೂಲ್‌ಹಾಫ್ ವಿರುದ್ಧ ಸೋತಿದ್ದಾರೆ. ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.





