ಸೆ.7ರಿಂದ ಮೂಲ ದಾಖಲೆಗಳ ಅಪ್‍ಲೋಡ್‍ಗೆ ಅವಕಾಶ: ಪರಿಷ್ಕೃತ ವೇಳಾಪಟ್ಟಿ ಪ್ರಕಟ
ವೃತ್ತಿಪರ ಕೋರ್ಸ್‍ಗಳಿಗೆ ನಡೆಯುವ ಕೌನ್ಸಿಲಿಂಗ್
ಬೆಂಗಳೂರು, ಸೆ. 6: ವೃತ್ತಿಪರ ಕೋರ್ಸ್‍ಗಳಿಗೆ ನಡೆಯುವ ಕೌನ್ಸಿಲಿಂಗ್‍ನ ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
2020ನೆ ಸಾಲಿನ ಜೆಇಇ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳ ಮನವಿಯ ಮೇರೆಗೆ ಸೆ.2 ರಿಂದ ಪ್ರಾರಂಭವಾಗಬೇಕಿದ್ದ ಮೂಲ ದಾಖಲೆಯನ್ನು ಅಪ್‍ಲೋಡ್ ಮಾಡುವ ಪ್ರಕ್ರಿಯೆಯನ್ನ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಪ್ರಸುತ್ತ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ನಾಳೆ(ಸೆ.7) ಬೆಳಗ್ಗೆ 11 ಗಂಟೆ ನಂತರ ಪ್ರಕ್ರಿಯೆ ಶುರುವಾಗಲಿದೆ.
ನಿಗದಿಪಿಡಿಸಿರುವ ಪರಿಷ್ಕೃತ ವೇಳಾಪಟ್ಟಿಗೆ ಅನುಸಾರವಾಗಿ ಅವರ ಅರ್ಹತೆಗೆ ಅನುಗುಣವಾಗಿ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಪ್ರತಿಯೊಂದು ದಾಖಲೆಯನ್ನು ಅಪಲೋಡ್ ಮಾಡಲು ಸೂಚಿಸಲಾಗಿದೆ.
ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸಲು ಖುದ್ದು ಪ್ರಾಧಿಕಾರಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ. ಇನ್ನು ವೇಳಾಪಟ್ಟಿಯಂತೆ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದಲ್ಲೇ ದಾಖಲೆಗಳನ್ನ ಅಪಲೋಡ್ ಮಾಡಬೇಕು.
ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
ದಿನಾಂಕ ರ್ಯಾಂಕ್ ಸಂಖ್ಯೆ
7 ರಿಂದ 8ರವರೆಗೆ - 1-2000
9 ರಿಂದ10ರವರೆಗೆ - 2,001-7000
11 ರಿಂದ 14ರವರೆಗೆ - 7,001-15,000
15ರಿಂದ 17ರವರೆಗೆ - 15,001-25,000
18ರಿಂದ 20ರವರೆಗೆ - 25,001- 40,000
21 ರಿಂದ 23ರವರೆಗೆ - 40,001-70,000
24ರಿಂದ 27ರವರೆಗೆ - 70,001-1,00,000
28 ರಿಂದ ಅ.1ರವರೆಗೆ- 1,00,001-ಲಾಸ್ಟ್ ರ್ಯಾಂಕ್







