ಘನವಸ್ತು ಭೌತಶಾಸ್ತ್ರೀಯ ಗುಣಗಳು’ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು, ಸೆ.6: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಘನವಸ್ತುಗಳ ಭೌತಶಾಸ್ತ್ರೀಯ ಗುಣಗಳು’ ಎಂಬ ವಿಷಯದಲ್ಲಿ ವರ್ಚುವಲ್ ಸಂಹವನ ಮಾಧ್ಯಮದ ಮೂಲಕ ಅಂತರಾಷ್ಟ್ರೀಯ ವಿಚಾರ ಸಂಕಿರಣವು ಇತ್ತೀಚೆಗೆ ನಡೆದಿದೆ.
ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಆಸ್ಟ್ರೇಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೊ.ಚೆನ್ನಪತಿ ಜಗದೀಶ್, ನಾಲ್ಕನೆಯ ಕೈಗಾರಿಕಾ ಕ್ರಾಂತಿಯು ಬೆಳಕನ್ನು ಅವಲಂಬಿಸಿದೆ ಎಂದು ಹೇಳಿದರು.
ಮೂರನೆಯ ವಿಶ್ವಯುದ್ಧ ನೀರಿನ ಹಂಚಿಕೆಯ ಕುರಿತು ಸುರತ್ಕಲ್ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಪ್ರೊ.ಅರುಣ್ ಇಸ್ಲೂರ್, ವಿಜ್ಞಾನದ ವಿವಿಧ ವಿಭಾಗಗಳನ್ನು ಪ್ರತ್ಯೇಕಿಸುವ ಕಾಲದ ಕುರಿತು ಪ್ರೊ.ಪ್ರಕಾಶ್ ಪಿ. ಕಾರಟ್, ಭಾರತೀಯ ಮೂಲದ ಅಮೆರಿಕದ ವಿಜ್ಞಾನಿಳಾದ ಡಾ.ದೀಪಾ ರಘು, ಡಾ.ಕೆ.ಪಿ. ಮೋಹನಚಂದ್ರ, ಡಾ.ಸ್ಮಿತಿಕಾ ಸುಬ್ರಮಣಿ, ಪಾಂಡಿಚೇರಿ ಇಂಜಿನಿಯರಿಂಗ್ ಕಾಲೇಜಿನ ಡಾ. ಹರೀಶ್ ಕುಮಾರ್, ಹೈದರಾಬಾದ್ ಟಾಟಾ ಸಂಸ್ಥೆಯ ಡಾ.ಧವಳಸೂರಿ ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಿರು. ಸುಮಾರು 35ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡಿಸಿದರು. ಸುಮಾರು 700ಕ್ಕೂ ಹೆಚ್ಚು ವಿಷಯಾರ್ಥಿಗಳು ಭಾಗವಹಿಸಿದ್ದರು.
ವಿಚಾರ ಸಂಕಿರಣದಲ್ಲಿ ಕಾಲೇಜಿನ ಪ್ರಾಂಶುಪಾಲ ವಂ.ಡಾ.ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಡಾ.ಚಂದ್ರ ಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗ ಮುಖ್ಯಸ್ಥ ಪ್ರೊ.ಲಾರೆನ್ಸ್ ಪಿಂಟೊ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಕುಮಾರ ಕೆ. ವಂದಿಸಿದರು.





