ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಹುತಾತ್ಮ
ಶ್ರೀನಗರ, ಸೆ. 6: ಉತ್ತರಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಶನಿವಾರ ನಡೆಸಿದ ಗುಂಡು ಹಾಗೂ ಮೋರ್ಟಾರ್ ಶೆಲ್‌ಗಳ ದಾಳಿಯಿಂದ ಭಾರತೀಯ ಸೇನಾ ಪಡೆಯ ಓರ್ವ ಯೋಧ ಹುತಾತ್ಮನಾಗಿದ್ದಾರೆ. ಅಲ್ಲದೆ ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ನೌಗಾಂವ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಸೆಪ್ಟಂಬರ್ 5ರಂದು ಬೆಳಗ್ಗೆ ಪಾಕಿಸ್ತಾನ ಸೇನೆ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾಗೂ ಮೋರ್ಟರ್ ಶೆಲ್‌ಗಳ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನಾ ಪಡೆಯ ಯೋಧರು ಸೂಕ್ತ ಪ್ರತ್ಯುತ್ತರ ನೀಡಿದರು.
ಈ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದಾರೆ ಹಾಗೂ ಇಬ್ಬರು ಯೋಧರು ಗಾಯಗೊಂಡರು. ಅವರನ್ನು 92 ಬೇಸ್ ಅಸ್ಪತ್ರೆ (ಶ್ರೀನಗರ)ಯಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಎಂದು ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.
Next Story





