ಉಳ್ಳಾಲ: ಕೊರೋನ ವಾರಿಯರ್ಸ್ ಗೆ ಸೇವಾಭಿನಂದನೆ
ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಸಹಯೋಗದೊಂದಿಗೆ ಕೆಆರ್ ಸಿ, ಎನ್ಐಟಿಕೆ ವತಿಯಿಂದ ಕೋವಿಡ್ 19 ಕೊರೋನ ವಾರಿಯರ್ಸ್ ಅವರಿಗೆ ಸೇವಿಭಿನಂದನೆ ಕಾರ್ಯಕ್ರಮ ವು ನಗರ ಸಭಾ ಕಚೇರಿ ವ್ಯಾಪ್ತಿಯ ಮಹಾತ್ಮ ಗಾಂಧಿ ವೇದಿಕೆಯಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ವಿವಿ ಉಪಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಿದರು. ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಗರಸಭೆ ಪೌರಾಯುಕ್ತ ರಾಯಪ್ಪ, ಮಾಜಿ ಅಧ್ಯಕ್ಷ ಇಸ್ಮಾಯಿಲ್, ಕೃಷ್ಣಪ್ಪ ಸಾಲ್ಯಾನ್, ಸದಾನಂದ ಬಂಗೇರ,ಸೆಬೆಸ್ಟಿಯನ್ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ, ಜಿಪಂ ಸದಸ್ಯ ಧನಲಕ್ಷ್ಮಿ ಗಟ್ಟಿ , ಅಲೋಶಿಯಸ್ ಅಲ್ಬುಕರ್ಕ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊರೋನ ವಾರಿಯರ್ಸ್ ಆಗಿ ದುಡಿದ ಉಳ್ಳಾಲ ನಗರ ಸಭಾ ಸದಸ್ಯರು, ಮಾಧ್ಯಮ ಮಿತ್ರರು, ಅಬ್ಬಕ್ಕ ವನಿತಾ ವಾರಿಯರ್ಸ್, ಅಂಗನವಾಡಿ ಕಾರ್ಯಕರ್ತೆಯರು, ನಗರ ಸಭಾ ಪೌರಕಾರ್ಮಿಕರಿಗೆ ಸೇವಾಭಿನಂದನೆ ಮಾಡಲಾ ಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ ಸ್ವಾಗತಿಸಿದರು. ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಅಝೀಝ್ ಹಕ್ ವಂದಿಸಿದರು.





