ಬಾಂಗ್ಲಾ: ಅನಿಲ ಸ್ಫೋಟ; ಮೃತರ ಸಂಖ್ಯೆ 22ಕ್ಕೇರಿಕೆ

ಢಾಕಾ,ಸೆ.6: ಬಾಂಗ್ಲಾದ ನಾರಾಯಣಗಂಜ್ ನಗರದಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಅನಿಲ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ರವಿವಾರ 21ಕ್ಕೇರಿದೆ. ಘಟನೆಯಲ್ಲಿ ಗಾಯಗೊಂಡಿರುವ 25ಕ್ಕೂ ಅಧಿಕ ಮಂದಿಗೆ ಢಾಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂ ಢಾಕಾ ಟ್ರಿಬ್ಯೂನ್ ದಿನತ್ರಿಕೆ ವರದಿ ಮಾಜಿದೆ.
ಶುಕ್ರವಾರ ಸಂಜೆಯ ಪ್ರಾರ್ಥನೆ ಸಲ್ಲಿಕೆಗಾಗಿ ನೂರಾರು ಜನರು ಮಸೀದಿಯಲ್ಲಿ ಸೇರಿದ್ದಾಗ ಸ್ಫೋಟ ಸಂಭವಿಸಿರುವುದಾಗಿ ತಿಳಿದುಬಂದಿದೆ.
ನೆಲದಡಿಯ ಪೈಪ್‌ಗಳಿಂದ ಸೋರಿಕೆಯಾಗಿದ್ದ ಅನಿಲವು ಮಸೀದಿಯೊಳಗೆ ತುಂಬಿಕೊಂಡಿತ್ತು. ಯಾರೋ ಒಬ್ಬರು ಹವಾನಿಯಂತ್ರಕ ಅಥವಾ ಫ್ಯಾನ್‌ಗಳನ್ನು ಆನ್ ಅಥವಾ ಆಫ್ ಮಾಡಲು ಯತ್ನಿಸಿದಾಗ ಕಿಡಿಗಳು ಹೊತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದೆ ಎಂದು ನಾರಾಯಗಂಜ್ ಅಗ್ನಿಶಾಮಕದಳದ ಉಪ ಸಹಾಯಕ ನಿರ್ದೇಶಕ ಅಬ್ದುಲ್ಲಾ ಅಲ್ ಅರೆಫಿನ್ ತಿಳಿಸಿದ್ದಾರೆ.
Next Story





