103 ಕೆಜಿ ಜಿಂಕೆ ಮಾಂಸ ಸಾಗಾಟ: ಇಬ್ಬರು ಆರೋಪಿಗಳ ಸೆರೆ

ಶಿವಮೊಗ್ಗ, ಸೆ.7: ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಜಿಂಕೆ ಮಾಂಸ ಮಾರಾಟಕ್ಕೆ ಸಾಗಿಸುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 103 ಕೆಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶ್ರೀರಾಮಪುರ ನಿವಾಸಿ ಜಿಂಕೆ ಮಂಜ(30) ಮತ್ತು ಮಲ್ಲಿಗೇನ ಹಳ್ಳಿ ನಿವಾಸಿ ಉಮೇಶ್ ನಾಯ್ಕ್(32) ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳು ಸಾಗರ ರಸ್ತೆಯಿಂದ ಲಗಾನ್ ಕಲ್ಯಾಣ ಮಂದಿರದ ಬಳಿ ಆಟೋದಲ್ಲಿ ಜಿಂಕೆ ಮಾಂಸವನ್ನು ಸಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ತಿರುಮಲೇಶ್ ನೇತೃತ್ವದ ತಂಡ ಹಾಗೂ ಅರಣ್ಯ ಇಲಾಖೆ ತಂಡ ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 800 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವೊಂದನ್ನು ವಶಕ್ಕೆ ಪಡೆದುಕೊಂಡು ಬಂಧಿತ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
Next Story





