ಪೊಲೀಸರ ಸಮ್ಮುಖದಲ್ಲಿ ಕೊಲೆ ಆರೋಪಿಯನ್ನು ಥಳಿಸಿ ಕೊಂದ ಗ್ರಾಮಸ್ಥರು

ಲಕ್ನೊ, ಸೆ.7: ಶಾಲಾ ಶಿಕ್ಷಕನನ್ನು ಗುಂಡಿಟ್ಟು ಕೊಲೆಗೈದಿರುವ ಆರೋಪಿಯನ್ನು ಗ್ರಾಮಸ್ಥರು ಪೊಲೀಸರ ಸಮ್ಮುಖದಲ್ಲೇ ಹೊಡೆದು ಸಾಯಿಸಿರುವ ಆಘಾತಕಾರಿ ಘಟನೆ ಪೂರ್ವ ಉತ್ತರಪ್ರದೇಶದ ಕುಶಿ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಜನರ ಗುಂಪು ಕೋಲುಗಳಿಂದ ವ್ಯಕ್ತಿಯೊಬ್ಬನನ್ನು ಥಳಿಸುತ್ತಿರುವ ಹಾಗೂ ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಹೊಡೆಯದಂತೆ ತಡೆಯುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಜನರ ಆಕ್ರೋಶಕ್ಕೆ ಬಲಿಯಾಗಿರುವ ವ್ಯಕ್ತಿಯು ಗೋರಖ್‌ಪುರದವನಾಗಿದ್ದು, ಈತನು ಇಂದು ಬೆಳಗ್ಗೆ ತನ್ನ ತಂದೆಯ ಬಂದೂಕಿನಿಂದ ಶಿಕ್ಷಕನನ್ನು ಗುಂಡಿಟ್ಟು ಸಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Next Story





