ಚೀನಾಕ್ಕೆ ಸಂದೇಶ: ಟಿಬೆಟ್ ಸೈನಿಕನಿಗೆ ಅಂತಿಮ ನಮನ ಸಲ್ಲಿಸಿದ ಭಾರತೀಯ ಸೇನೆ

ಲೇಹ್/ಹೊಸದಿಲ್ಲಿ, ಸೆ.7: ಭಾರತೀಯ ಸೇನೆ ಹಾಗೂ ಲೇಹ್‌ನ ಟಿಬೆಟಿಯನ್ ಸಮುದಾಯದ ಸದಸ್ಯರು ಇಂದು ಬೆಳಗ್ಗೆ ಟಿಬೆಟಿಯನ್ ಸೈನಿಕ ನೈಮಾ ಟೆನ್ಝಿನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನೈಮಾ ಟೆನ್ಝಿನ್ ಟಿಬೆಟಿಯನ್ ಸೈನಿಕರ ವಿಶೇಷ ಗಡಿನಾಡು ಪಡೆಗೆ(ಎಸ್‌ಎಫ್‌ಎಫ್)ಸೇರಿದವರಾಗಿದ್ದು, ಭಾರತೀಯ ಕಮಾಂಡ್‌ನ ನೇತೃತ್ವದಲ್ಲಿ ಕಾರ್ಯನಿವರ್ಹಿಸುತ್ತಿದ್ದರು. ಕಳೆದ ವಾರ ದಕ್ಷಿಣ ಪಾಂಗೊಂಗ್‌ನ ವಿಂಟೇಜ್ ಲ್ಯಾಂಡ್‌ಮೈನ್‌ಗೆ ಕಾಲಿಟ್ಟ ನಂತರ ನೈಮಾನನ್ನು ಕೊಲ್ಲಲಾಯಿತು.
ಅಂತಿಮ ನಮನ ಸಲ್ಲಿಸಿದವರಲ್ಲಿ ಬಿಜೆಪಿ ನಾಯಕ ರಾಮ ಮಾಧವ್ ಕೂಡ ಇದ್ದರು. ಬಿಜೆಪಿಯ ಉನ್ನತ ನಾಯಕ ರಾಮಮಾಧವ್ ಅಂತ್ಯಕ್ರಿಯೆ ಚಿತ್ರಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಳಿಕ ಇದನ್ನು ಅಳಿಸಲಾಗಿದೆ.
ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿಯ ನೆಲೆಸಿರುವ ನಡುವೆ ಅಂತ್ಯಕ್ರಿಯೆಯಲ್ಲಿ ರಾಮ ಮಾಧವ್ ಉಪಸ್ಥಿತಿಯು ಚೀನಾಕ್ಕೆ ಬಲವಾದ ಸಂದೇಶವಾಗಿ ಕಂಡುಬಂದಿದೆ.
Next Story





