ಭೀಮಾನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಬಾಲಕರ ಶವ ಪತ್ತೆ

ಸಾಂದರ್ಭಿಕ ಚಿತ್ರ
ಯಾದಗಿರಿ, ಸೆ.7: ಎನ್ಡಿಆರ್ಎಫ್, ಅಗ್ನಿಶಾಮಕ ದಳ ಮತ್ತು ಮೀನುಗಾರರ ಸತತ ಶೋಧ ಕಾರ್ಯಾಚರಣೆಯ ಬಳಿಕ ಭೀಮಾನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಬಾಲಕರ ಶವಗಳು ಪತ್ತೆಯಾಗಿವೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದ ಭೀಮಾನದಿಯಲ್ಲಿ ರವಿವಾರ ಸಂಜೆ ನಾಲ್ವರು ಸ್ನೇಹಿತರು ಭೀಮಾನದಿಯಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಅಮಾನ್, ಅಯಾನ್, ರೆಹಾನ್, ಇರ್ಫಾನ್ ನೀರು ಪಾಲಾಗಿದ್ದರು.
ರವಿವಾರ ಕತ್ತಲಾದ ಹಿನ್ನೆಲೆ ಶೋಧ ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ತಡರಾತ್ರಿ ಹೈದರಾಬಾದ್ನಿಂದ ಎನ್ಡಿಆರ್ಎಫ್ ತಂಡವನ್ನು ಕರೆಸಲಾಗಿತ್ತು. ಸೋಮವಾರ ಬೆಳಗ್ಗೆ ಎನ್ಡಿಆರ್ಎಫ್ ತಂಡ, ಅಗ್ನಿಶಾಮಕದಳ ಹಾಗೂ ಮೀನುಗಾರರು ಶವ ಶೋಧ ಕಾರ್ಯಾಚರಣೆ ನಡೆಸಿ ಶವ ಪತ್ತೆ ಮಾಡಿದ್ದಾರೆ.
Next Story





