ಬೆಳ್ತಂಗಡಿ : ಅಬ್ಬೋನು ಶಾಫಿ ಪಲ್ಲಾದೆ ನಿಧನ

ಬೆಳ್ತಂಗಡಿ : ಕಳಿಯ ನ್ಯಾಯತರ್ಪು ಗ್ರಾಮದ ನಾಳ ಪಲ್ಲಾದೆ ನಿವಾಸಿ, ಹಿರಿಯ ಸಾಮಾಜಿಕ ಕಾರ್ಯಕರ್ತ ಅಬ್ಬೋನು ಶಾಫಿ ಪಲ್ಲಾದೆ (84) ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ನಾಳ ಜಾರಿಗೆಬೈಲು ಮಸ್ಜಿದ್‌ನ ಆಡಳಿತ ಸಮಿತಿಯಲ್ಲಿ ದೀರ್ಘಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸುದೀರ್ಘ 45 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಳಿಯ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಇವರು ಎಸ್.ವೈ.ಎಸ್ ಇದರ ಜಾರಿಗೆಬೈಲು ಶಾಖೆ, ಸುನ್ನಿ ಮೆನೇಜ್‌ಮೆಂಟ್ ಅಸೋಸಿಯೇಷನ್ (ಎಸ್.ಎಮ್.ಎ) ಸಂಘಟನೆ ಸೇರಿದಂತೆ ವಿವಿಧ ಸುನ್ನೀ ಸಂಘಟನೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರರು, ಮೂವರು ಪುತ್ರಿಯರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಶಾಸಕ ವಸಂತ ಬಂಗೇರ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಮನ್ಶರ್ ತಂಙಳ್ ಸಹಿತ ಪ್ರಮುಖ ಗಣ್ಯರುಗಳು ಭೇಟಿ ಮಾಡಿ ಅಂತಿಮ ದರ್ಶನ ಪಡೆದರು.
Next Story





