ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪ್ರಾರಂಭ
ಉಡುಪಿ, ಸೆ.7: ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆಗಳು ರಾಜ್ಯಾದ್ಯಂತ ಇಂದಿನಿಂದ ಪ್ರಾರಂಭಗೊಂಡಿವೆ. ಪರೀಕ್ಷೆಗಳು ಸೆ.19ರವರೆಗೆ ಪೂರ್ವಾಹ್ನ ಹಾಗೂ ಅಪರಾಹ್ನ ಎರಡೂ ಹೊತ್ತು ನಡೆಯಲಿವೆ.
ಉಡುಪಿ ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಪೂರಕ ಪರೀಕ್ಷೆಗಳು ನಡೆಯಲು ವ್ಯವಸ್ಥೆಯಾಗಿದ್ದು, ಮೊದಲ ದಿನ ನಡೆದ ಉರ್ದು, ಸಂಸ್ಕೃತ, ಮಾಹಿತಿ ತಂತ್ರಜ್ಞಾನ, ಅಟೋಮೊಬೈಲ್, ಹೆಲ್ತ್ಕೇರ್, ಗೃಹವಿಜ್ಞಾನ ಸೇರಿದಂತೆ ಟ್ಟು ಎಂಟು ವಿಷಯಗಳ ಪರೀಕ್ಷೆಗೆ ಯಾವುದೇ ಅಭ್ಯರ್ಥಿಗಳು ಇರಲಿಲ್ಲ.
ಸೆ.8ರ ಮಂಗಳವಾರ ಇತಿಹಾಸ, ಸಂಖ್ಯಾಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.
Next Story