ಕೃಷಿಯೇ ಪ್ರಮುಖ ಸ್ವಉದ್ಯೋಗ: ರಘುಪತಿ ಭಟ್

ಉಡುಪಿ, ಸೆ.7: ಕೃಷಿ ಕ್ಷೇತ್ರದಲ್ಲಿ ಇರುವಷ್ಟು ಉಪಕಸುಬುಗಳು, ಅವಕಾಶ ಗಳು ಬೇರೆ ಯಾವುದೇ ಕ್ಷೇತ್ರದಲ್ಲಿ ಇಲ್ಲ. ಕೃಷಿ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಗ್ರಾಮೀಣ ವಿಕಾಸ ಸಮಿತಿ ವತಿಯಿಂದ ಸೆ.7ರಂದು ಆಯೋಜಿಸಲಾದ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕು ವ್ಯಾಪ್ತಿಯ ಸ್ವ-ಉದ್ಯೋಗ ತರಬೇತಿ ಕಾರ್ಯಾಗಾರ -2020 ‘ಕೃಷಿ’ ಎಂಬ ಶೀರ್ಷಿಕೆಯಡಿ ಆಧುನಿಕ ಕೃಷಿ, ಸಾಂಪ್ರದಾಯಿಕ ಕೃಷಿ ಮತ್ತು ಯಂತ್ರೋಪಕರಣಗಳ ಬಳಕೆ ಮತ್ತು ದುರಸ್ತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೊರೋನಾ ಸಂಕಷ್ಟದಿಂದ ಹಲವು ಮಂದಿ ಉದ್ಯೋಗ ನಷ್ಟ ಅನುಭವಿಸಿದ್ದು ಎಲ್ಲರಲ್ಲೂ ಅಭದ್ರತೆ ಕಾಡುತ್ತಿದೆ. ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು ಕೃಷಿ ಕ್ಷೇತ್ರದಲ್ಲಿ ವಿವಿಧ ಬಗೆಗಳಲ್ಲಿ ಅವಕಾಶಗಳು ಹೇರಳವಾಗಿವೆ. ಯುವಜನತೆ ಕೃಷಿ ಕ್ಷೇತ್ರದ್ತ ಒಲವು ತೋರಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿಯ ಜಿಲ್ಲಾ ಪ್ರಮುಖರಾದ ಪ್ರಮೋದ್ ಶೆಟ್ಟಿ, ಚೇರ್ಕಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಆತ್ಮ ನಿರ್ಭರ್ ಭಾರತ್ ಸಹ ಸಂಚಾಲಕ ಶ್ರೀನಿಧಿ ಹೆಗ್ಡೆ, ಆತ್ಮನಿರ್ಭರ ಭಾರತ್ ಉಡುಪಿ ಕಾಪು ಬ್ರಹ್ಮಾವರ ತಾಲೂಕು ಸಂಚಾಲಕರಾದ ಶಶಾಂಕ್ ಶಿವತ್ತಾಯ, ಡಾ.ಧನಂಜಯ್, ಡಾ.ಲಕ್ಷ್ಮಣ್, ಡಾ.ಸುಧೀರ್ ಕಾಮತ್, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಉಪಸ್ಥಿತರಿದ್ದರು.







