ಮಂಗಳೂರು ವೀಲ್ಸ್: ‘ಆಪೇ’ ತ್ರಿಚಕ್ರ ವಾಹನ ಲಭ್ಯ
► ಜನಮೆಚ್ಚುಗೆಗೆ ಪಾತ್ರವಾದ ವಿನೂತನ ರಿಕ್ಷಾ, ಗೂಡ್ಸ್ ಕ್ಯಾರಿಯರ್, ► ಪ್ರತೀ ಉಚಿತ ಸವಾರಿಗೆ ವಿಶೇಷ ಉಡುಗೊರೆ

ಮಂಗಳೂರು, ಸೆ.7: ನಗರದ ಕೊಟ್ಟಾರಚೌಕಿಯಲ್ಲಿನ ಮಂಗಳೂರು ವೀಲ್ಸ್ ಸಂಸ್ಥೆಯ ಶೋರೂಂನಲ್ಲಿ ಬಿಎಸ್6 ನೂತನ ಮಾದರಿಯ ‘ಆಪೇ’ ತ್ರಿಚಕ್ರ ವಾಹನಗಳು ಲಭ್ಯ ಇವೆ.
ದ.ಕ. ಜಿಲ್ಲೆಯ ಅಧಿಕೃತ ಮಾರಾಟಗಾರರಾದ ಮಂಗಳೂರು ವೀಲ್ಸ್ (ಪಿಯಾಜಿಯೋ) ಶೋರೂಂನಲ್ಲಿ ನೂತನ ಆಟೊರಿಕ್ಷಾ ಹಾಗೂ ಪವರ್‌ಫುಲ್ ಗೂಡ್ಸ್ ಕ್ಯಾರಿಯರ್‌ಗಳು ಹೊಸವಿನ್ಯಾಸದೊಂದಿಗೆ ಲಭ್ಯ ಇವೆ. 230 ಸಿಸಿ ಅಶ್ವಶಕ್ತಿ ಹೊಂದಿರುವ ‘ಎಲ್‌ಪಿಜಿ ಡಿಲಕ್ಸ್ ಆಟೊ ರಿಕ್ಷಾ’ ಮತ್ತು ‘ಎಲ್‌ಪಿಜಿ ಪ್ಲಸ್’ ಬಹುಗಾತ್ರದ ಆಟೊರಿಕ್ಷಾಗಳು ಕೂಡ ಪ್ರಯಾಣಿಕರ ಹಾಗೂ ಸರಕು ಸಾಗಣೆಗೆ ಅನುಕೂಲಕರವಾಗಿದೆ.
ಮಂಗಳೂರಿನ ಫಳ್ನೀರ್, ಮೆಲ್ಕಾರ್, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯಗಳಲ್ಲಿ ಮಾರಾಟ ಮತ್ತು ಸೇವಾಕೇಂದ್ರ ಹೊಂದಿರುವ ಮಂಗಳೂರು ವೀಲ್ಸ್ ಸಂಸ್ಥೆ ಗ್ರಾಹಕರ ಸೇವೆಯಲ್ಲಿ ಅಪಾರ ಜನಮನ್ನಣೆ ಗಳಿಸಿದೆ. ಗೂಡ್ಸ್ ಕ್ಯಾರಿಯರ್ ಹಾಗೂ ಆಟೊ ರಿಕ್ಷಾಗಳು ಜಿಲ್ಲೆಯ ಎಲ್ಲ ಶಾಖೆಗಳಲ್ಲಿ ಉಚಿತ ಸವಾರಿಗಾಗಿ ಲಭ್ಯ ಇವೆ. ಪ್ರತೀ ಉಚಿತ ಸವಾರಿಗೆ ವಿಶೇಷ ಉಡುಗೊರೆ ಕೂಡ ಲಭ್ಯವಿದೆ ಎಂದು ಮಂಗಳೂರು ವೀಲ್ಸ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಕೀ ಹಸ್ತಾಂತರ: ಬಿಎಸ್6 ನೂತನ ಮಾದರಿಯ ವಾಹನದ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಡೆಸ್ಮಂಡ್ ಜತ್ತನ್ನ, ಎಲ್‌ಪಿಜಿ ಆಟೊರಿಕ್ಷಾವು ಸುಲಭ ಹಣಕಾಸು ವ್ಯವಸ್ಥೆಯೊಂದಿಗೆ ಆರಂಭಿಕ 22,222 ರೂ.ಗೆ ಹಾಗೂ ಗೂಡ್ಸ್ ಕ್ಯಾರಿಯರ್ ಆರಂಭಿಕ 33,333 ರೂ.ಗೆ ಡೌನ್‌ಪೇಮೆಂಟ್‌ನಲ್ಲಿ ಲಭ್ಯವಿದೆ ಎಂದರು.
ಸಮಾರಂಭದಲ್ಲಿ ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಕೆ.ಸಿ. ಹರೀಶ್ಚಂದ್ರ ರಾವ್, ಸೇಲ್ಸ್ ವಿಭಾಗದ ಸೀನಿಯರ್ಸ್ ನಾಗರಾಜ್ ಹಾಗೂ ಆಶಿಕ್ ಉಪಸ್ಥಿತರಿದ್ದರು.








