ಖಾಸಗಿ ಬಸ್ ಚಾಲಕ ನಾಪತ್ತೆ

ಮಂಗಳೂರು, ಸೆ.7: ಖಾಸಗಿ ಬಸ್ ಚಾಲಕನೋರ್ವ ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಕ್ತಿನಗರ ನಿವಾಸಿ ಗ್ಲಾಡ್‌ಸನ್ ಕರ್ಕೆಡ (60) ನಾಪತ್ತೆಯಾದ ಬಸ್ ಚಾಲಕ ಎಂದು ತಿಳಿದುಬಂದಿದೆ. ಇವರು ಸೆ.2ರಂದು ತನ್ನ ಮನೆಯಿಂದ ಖಾಸಗಿ ಬಸ್ ಟ್ರಾವೆಲ್ಸ್ ಕಚೇರಿಗೆ ಕೆಲಸಕ್ಕೆಂದು ತೆರಳಿದ್ದಾರೆ. ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಹರೆ; ಎತ್ತರ- 5 ಅಡಿ 8 ಇಂಚು, ಸಾಧಾರಣ ಶರೀರ, ಬಿಳಿ ಕಪ್ಪು ಮಿಶ್ರಿತ ತಲೆಕೂದಲು, ಬಲಕೈಯಲ್ಲಿ ಶಿಲುಬೆಯ ಅಚ್ಚೆ ಇದೆ. ಇವರು ನೀಲಿಗೆರೆ ಇರುವ ಬಿಳಿ ಬಣ್ಣದ ತುಂಬು ತೊಳಿನ ಶರ್ಟ್, ಕಂದು ಬಣ್ಣದ ಪ್ಯಾಂಟ್, ಕಪ್ಪು ಫ್ರೇಂ ಕನ್ನಡಕ ಧರಿಸಿದ್ದರು. ಕನ್ನಡ ಮತ್ತು ತುಳು ಮಾತನಾಡುತ್ತಾರೆ.
ಕಾಣೆಯಾದ ವ್ಯಕ್ತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕಂಕನಾಡಿ ನಗರ ಠಾಣೆ (0824- 2220529) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





