ಸ್ಥಳೀಯ ಭಾಷೆಗಳ ಬಗೆಗಿನ ನಿರ್ಲಕ್ಷ್ಯ ಖಂಡನೀಯ: ಕಾಂಗ್ರೆಸ್

ಬೆಂಗಳೂರು, ಸೆ.7: ಪರಿಸರ ಸಚಿವಾಲಯದ ಕರಡು ನೀತಿಯನ್ನು ಸರ್ವೋಚ್ಚ ನ್ಯಾಯಾಲಯದ ಸೂಚನೆಯನ್ನೂ ಮೀರಿ ಇಂಗ್ಲಿಷ್-ಹಿಂದಿ ಹೊರತಾಗಿ ಬೇರೆ ಭಾಷೆಗಳಿಗೆ ಅನುವಾದಿಸುವುದಿಲ್ಲ ಎಂದು ಕೇಂದ್ರ ಸರಕಾರ ಉದ್ಧಟತನ ಪ್ರದರ್ಶಿಸುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯ ಸಂವಿಧಾನದತ್ತ ಹಕ್ಕುಗಳನ್ನು ಧಮನಿಸುವ ಸರ್ವಾಧಿಕಾರಿ ನಡೆ. ಸ್ಥಳೀಯ ಭಾಷೆಗಳ ಬಗೆಗಿನ ನಿರ್ಲಕ್ಷ್ಯ ಖಂಡನೀಯ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Next Story





