ಸುಶಾಂತ್ ಸಿಂಗ್ ಸಹೋದರಿಯರ ವಿರುದ್ಧ ಎಫ್‌ಐಆರ್ ದಾಖಲಿಸಿದ ಮುಂಬೈ ಪೊಲೀಸ್
ಆತ್ಮಹತ್ಯೆಗೆ ಪ್ರಚೋದನೆ ಆರೋಪ

ಮುಂಬೈ,ಸೆ.8:ನಟಿ ರಿಯಾ ಚಕ್ರವರ್ತಿನೀಡಿರುವ ದೂರಿನ ಮೇರೆಗೆ ಮುಂಬೈ ಪೊಲೀಸರು ಮಂಗಳವಾರ ಸುಶಾಂತ್ ಸಿಂಗ್ ರಾಜ್‌ಪೂತ್ ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಹಾಗೂ ಮೀಟು ಸಿಂಗ್ ಹಾಗೂ ದಿಲ್ಲಿ ಮೂಲದ ರಾಮಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ವಂಚನೆ,ಫೋರ್ಚರಿ, ಆತ್ಮಹತ್ಯೆಗೆ ಪ್ರಚೋದನೆ,ಕ್ರಿಮಿನಲ್ ಪಿತೂರಿ ಹಾಗೂ ಮಾದಕದ್ರವ್ಯ ಹಾಗೂ ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆಯ ವಿವಿಧ ವಿಭಾಗಗಳ ಅಡಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎನ್‌ಡಿಪಿಎಸ್ ಕಾಯ್ದೆ ಅಡಿ ವಶಪಡಿಸಿಕೊಂಡಿರುವ ನಿಷೇಧಿತ ಔಷಧಿಗಾಗಿ ಸರಕಾರಿ ಆಸ್ಪತ್ರೆಯ ಲೆಟರ್‌ಹೆಡ್‌ನಲ್ಲಿ ಪಿತೂರಿ ನಡೆಸಿ ಸುಳ್ಳು ಪ್ರಿಸ್ಕ್ರಿಪ್ಶನ್ ಪಡೆದುಕೊಳ್ಳಲಾಗಿದೆ. ಡೋಸೇಜ್ ಹಾಗೂ ಪ್ರಮಾಣವನ್ನು ಮೇಲ್ವಿಚಾರಣೆ ನಡೆಸದೆ ಅದು ದೀರ್ಘಕಾಲದ ಸಮಸ್ಯೆಗೆ ಕಾರಣವಾಗಬಹುದು ಹಾಗೂ ಆತ್ಮಹತ್ಯೆಗೂ ಕಾರಣವಾಯಿತು ಎಂದು ಎಫ್‌ಐಆರ್‌ನಲ್ಲಿದೆ.
ರಿಯಾ ಚಕ್ರವರ್ತಿಯ ದೂರಿನ ಪ್ರಕಾರ,ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್‌ಗಳಾದ 420, 464, 465, 466,468,474, 306,120 ಬಿ, 34 ಐಪಿಸಿ ಹಾಗೂ ಆರ್/ಡಬ್ಲು ಸೆಕ್ಷನ್ 8(ಸಿ),ಎನ್‌ಡಿಪಿಎಸ್ ಕಾಯ್ದೆಯ 21,22(ಎ)29 ಅಡಿ ಪ್ರಕರಣ ದಾಖಲಿಸಲಾಗಿದೆ. ಗೌರವಾನ್ವಿತ ಸುಪ್ರೀಂಕೋರ್ಟ್‌ನ ಆದೇಶಗಳಿಗೆ ಅನುಗುಣವಾಗಿ ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಸಿಬಿಐಗೆ ಸೂಕ್ತವಾಗಿ ವರ್ಗಾಯಿಸಲಾಗಾಗುತ್ತದೆ ಎಂದು ಮುಂಬೈ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.







