ರಾಜ್ಯ ಮಟ್ಟದ ಬೈಕ್ ರೈಡರ್ ಜೀತು ಪಟೇಲ್ ನಿಧನ
ಮಂಗಳೂರು, ಸೆ. 8: ಕೊಡಿಯಾಲ್ ಬೈಲ್ ನಿವಾಸಿ ಜೀತು ವಿ. ಪಟೇಲ್ (47) ಅಲ್ಪಕಾಲದ ಅಸೌಖ್ಯದಿಂದ ಸೆ. 6 ರಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಜೀತು ಪಟೇಲ್ ರಾಜ್ಯ ಮಟ್ಟದ ಬೈಕ್ ರೈಡರ್ ಆಗಿದ್ದರು. ವೈ.ಎಂ.ಸಿ. ಕೊಡಿಯಾಲ್ ಬೈಲ್ ವಾಲಿಬಾಲ್ ತಂಡದ ಆಟಗಾರರಾಗಿದ್ದು, ಕ್ರೀಡಾ ಪೋಷಕರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
Next Story