ಕಾಸರಗೋಡು : ಗ್ಯಾಸ್ ಟ್ಯಾಂಕರ್ ಪಲ್ಟಿ, ಅನಿಲ ಸೋರಿಕೆ
ಕಾಸರಗೋಡು : ಮಂಗಳೂರಿನಿಂದ ಕೋಝಿಕ್ಕೋಡ್ ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ರಸ್ತೆ ಬದಿ ಉರುಳಿದ ಘಟನೆ ಇಂದು ಸಂಜೆ ರಾಷ್ಟ್ರೀಯ ಹೆದ್ದಾರಿಯ ಬೇವಿಂಜೆಯಲ್ಲಿ ನಡೆದಿದೆ.
ಅನಿಲ ಸೋರಿಕೆ ಉಂಟಾದ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಸ್ಥಳೀಯರನ್ನು ತೆರವುಗೊಳಿಸಲಾಗಿದೆ.
ಬೇವಿಂಜೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಟ್ಯಾಂಕರ್ ಉರುಳಿದ ಕಾರಣ ಚಾಲಕ ಗಾಯಗೊಂಡಿದ್ದಾರೆ. ಸೋರಿಕೆಯನ್ನು ತಡೆಯಲು ಕ್ರಮ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Next Story