ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರು ನಮ್ಮ ಸೋದರರಿದ್ದಂತೆ: ಸಂಸದ ಅನಂತಕುಮಾರ್ ಹೆಗಡೆ

ಬೆಳಗಾವಿ, ಸೆ.8: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರು ನಮ್ಮ ಸೋದರರಿದ್ದಂತೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಖಾನಾಪುರ ಕ್ಷೇತ್ರದಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಶಾಸಕ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ಖಾನಾಪುರದಲ್ಲಿ ಎಂಇಎಸ್ ಆಯ್ಕೆಯಾಗುತ್ತಾ ಬಂದಿತ್ತು. ಇದರಿಂದ ನಮಗೆ ವ್ಯತ್ಯಾಸ ಆಗಿಲ್ಲ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಬಾರದಿತ್ತು ಎಂದು ಹೇಳಿದ್ದಾರೆ.
ಕಳೆದ 15 ವರ್ಷಗಳಲ್ಲಿ ಖಾನಾಪುರಕ್ಕೆ ಭೂಮಿ ಪೂಜೆಗೆ ಅತ್ಯಂತ ಕಡಿಮೆ ಬಾರಿ ಬಂದಿದ್ದೇನೆ. ಏಕೆಂದರೆ ನಮ್ಮ ಸಹೋದರರಂತಿದ್ದ ಎಂಇಎಸ್‍ನವರು ಭೂಮಿ ಪೂಜೆ ಮಾಡುತ್ತಿದ್ದರು. ಅವರು ಭೂಮಿ ಪೂಜೆ ಮಾಡಿದರೇನು, ನಾನು ಮಾಡಿದರೇನು ವ್ಯತ್ಯಾಸ ಇರುತ್ತಿರಲಿಲ್ಲ. ಆದರೆ ಈಗ ಅನಿವಾರ್ಯತೆ ಇದೆ. ನಾವೇ ಭೂಮಿ ಪೂಜೆ ಮಾಡಬೇಕಾಗಿದೆ ಎಂದರು.
ಸೋದರತ್ವ ಸಂಬಂಧ ತಿಳಿಯುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ನವರಿಲ್ಲ. ಸೋದರತ್ವದ ಸಂಬಂಧ ಸೋದರರ ಜೊತೆ ಇರುತ್ತದೆ ಎಂದು ಹೇಳಿದ್ದಾರೆ.





