ಪಿಯುಸಿ ಪೂರಕ ಪರೀಕ್ಷೆ: 30 ಮಂದಿ ಗೈರು
ಉಡುಪಿ, ಸೆ.8: ಜಿಲ್ಲೆಯ ಒಟ್ಟು ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಮೂರು ವಿಷಯಗಳಿಗೆ ಒಟ್ಟು 30 ಮಂದಿ ಗೈರುಹಾಜರಾಗಿದ್ದರು ಎಂದು ಉಡುಪಿ ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತಿಹಾಸ ವಿಷಯದಲ್ಲಿ 181 ಮಂದಿ ಪರೀಕ್ಷೆ ಬರೆದಿದ್ದು 20 ಮಂದಿ ಗೈರು ಹಾಜರಾಗಿದ್ದರೆ, ಸಂಖ್ಯಾಶಾಸ್ತ್ರ ವಿಯದಲ್ಲಿ 50 ಪರೀಕ್ಷೆಗೆ ಹಾಜರಾಗಿ ಎಂಟು ಮಂದಿ ಗೈರುಹಾಜರಾಗಿದ್ದಾರು. ಜೀವಶಾಸ್ತ್ರ ವಿಷಯದಲ್ಲಿ 25 ಮಂದಿ ಪರೀಕ್ಷೆ ಬರೆದಿದ್ದು ಇಬ್ಬರು ಮಾತ್ರ ಗೈರಾಗಿದ್ದರು ಎಂದು ಡಿಡಿಪಿಯು ತಿಳಿಸಿದ್ದಾರೆ.
ನಾಳೆ ಉಡುಪಿ ಜಿಲ್ಲೆಯಲ್ಲಿ ಹಿಂದಿ ವಿಷಯದ ಪರೀಕ್ಷೆ ನಡೆಯಲಿದೆ.
Next Story





