ದ.ಕ.ಜಿಲ್ಲೆ : 374 ಕೊರೋನ ಪಾಸಿಟಿವ್, 232 ಮಂದಿ ಗುಣಮುಖ

ಮಂಗಳೂರು, ಸೆ.8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 374 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. 232 ಮಂದಿ ಗುಣಮುಖಗೊಂಡಿದ್ದು, ಮೂವರು ಮೃತಪಟ್ಟಿದ್ದಾರೆ.
ಶೀತಜ್ವರದ ಲಕ್ಷಣದೊಂದಿಗೆ 236 ಮಂದಿಗೆ, ಉಸಿರಾಟ ಸಮಸ್ಯೆಯ 18 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, 120 ಮಂದಿಯ ಸೋಂಕಿನ ಮೂಲಕ ಪತ್ತೆಹಚ್ಚಲಾಗುತ್ತಿದೆ. ಮಂಗಳೂರು ತಾಲೂಕಿನ 219 ಮಂದಿಗೆ, ಬಂಟ್ವಾಳ 61, ಪುತ್ತೂರು 36, ಸುಳ್ಯ 6, ಬೆಳ್ತಂಗಡಿ 32, ಹೊರಜಿಲ್ಲೆಯ 20 ಮಂದಿಗೆ ಕೊರೋನ ಹರಡಿದೆ. ಗುಣಮುಖಗೊಂಡವರ ಪೈಕಿ 35 ಮಂದಿ ಕೋವಿಡ್ ಕೇರ್ ಸೆಂಟರ್‌ನಲ್ಲಿ, 148 ಮಂದಿ ಮನೆಯಲ್ಲಿ, 49 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಮೂವರ ಪೈಕಿ ಒಬ್ಬರು ಪುತ್ತೂರು, ಇಬ್ಬರು ಹೊರಜಿಲ್ಲೆಯವರು.
ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 15,452ಕ್ಕೆ ಏರಿಕೆಯಾಗಿದೆ. ಈ ಪೈಕಿ 3,054 ಸಕ್ರಿಯ ಪ್ರಕರಣಗಳಾಗಿವೆ. 11,986 ಮಂದಿ ಗುಣಮುಖಗೊಂಡಿದ್ದಾರೆ. 412 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.
Next Story





