ಎಸ್ಸೆಸ್ಸೆಫ್ ಸುರತ್ಕಲ್ ಸೆಕ್ಟರ್‌ನಿಂದ ದಅವ ಕಾನ್ಫರೆನ್ಸ್

ಮಂಗಳೂರು, ಸೆ.8: ರಾಜ್ಯ ಎಸ್ಸೆಸ್ಸೆಫ್ ಸರ್ಕ್ಯುಲರ್ ಮೇರೆಗೆ ಸುರತ್ಕಲ್ ಸೆಕ್ಟರ್ ಘಟಕದಲ್ಲಿ ದಅವ ಕಾನ್ಫರೆನ್ಸ್ ಹಾಗೂ ಇನ್‌ಸ್ಪೈರೋ ಮೋಟಿವೇಶನ್ ತರಗತಿಯು ಸುರತ್ಕಲ್ ಸೆಕ್ಟರ್‌ನ ಅಧ್ಯಕ್ಷ ರಶೀದ್ ಸಅದಿ ಅಧ್ಯಕ್ಷತೆಯಲ್ಲಿ ಶೇಡಿಗುರಿಯಲ್ಲಿ ನಡೆಯಿತು.
ಪಶ್ಚಿಮ ವಲಯದ ಸದಸ್ಯ ಹನೀಫ್ ಅಹ್ಸನಿ ಶೇಡಿಗುರಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಎಸ್‌ವೈಎಸ್ ಸಾಂತ್ವನ ವಿಭಾಗದ ಚೇರ್ಮನ್ ಜಿ.ಎಂ. ಕಾಮಿಲ್ ಸಖಾಫಿ ಉಸ್ತಾದರು ಉತ್ತಮ ಶೈಲಿಯಲ್ಲಿ ತರಗತಿ ನಡೆಸಿಕೊಟ್ಟರು. ಉಸ್ತಾದರಿಗೆ ಸುರತ್ಕಲ್ ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಸದಸ್ಯ ಆರಿಫ್ ಝುಹ್ರಿ ಮುಕ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಬಶೀರ್ ಹಿಮಮಿ ಸಖಾಫಿ ಜೋಕಟ್ಟೆ ಸಂದೇಶ ಭಾಷಣ ಮಾಡಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕ ಪಡೆದ ಕುಳಾಯಿ ಶಾಖೆಯ ಅಮಾನ್ ಎಂಬ ವಿದ್ಯಾರ್ಥಿಗೆ ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು. ಧಾರ್ಮಿಕ ಬಿರುದುದಾರಿಗಳಾಗಿ ಹೊರಬಂದ ಉಸ್ತಾದರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಸಿದ್ದೀಕ್ ಶೇಡಿಗುರಿ, ಎಸ್‌ವೈಎಸ್ ಸುರತ್ಕಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಶೇಡಿಗುರಿ, ಹೈದರ್ ಕಾಟಿಪಳ್ಳ, ಅಲಿ ಸಅದಿ ಜೋಕಟ್ಟೆ, ಫಾರೂಕ್ ಅಹ್ಸನಿ ಶೇಡಿಗುರಿ, ಬಾಸಿತ್ ಸಅದಿ ಸುರತ್ಕಲ್, ಶಾಹಿದ್ ನಿಝಾಮಿ ಜೋಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೆಕ್ಟರ್‌ನ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಸ್ವಾಗತಿಸಿದರು. ರಫ್ತಾನ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು. ಖಾದರ್ ಬದ್ರಿಯಾನಗರ ವಂದಿಸಿದರು.







